ಸ್ವರಪ್ರೀತಿಯ ಬೆಳಗು ತೋರಿದ ‘ನಾದಪಿಯಾ’

[ದಿ.13-10-2017 ರಂದು, ಹೊನ್ನಾವರದಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದ ಪಂ.ನಾರಾಯಣ ಪಂಡಿತ್ ರವರು, ಹಿಂದೂಸ್ಥಾನಿ ಸಂಗೀತಗಾರರಾಗಿ, ವಯೋಲಿನ ವಾದಕರಾಗಿ, ವಾಗ್ಗೇಯಕಾರರಾಗಿ ಪ್ರಾವೀಣ್ಯತೆ ಹೊಂದಿದವರಾಗಿದ್ದರು. ಅವರ ಶಿಷ್ಯೆಯಾದ ಶ್ರೀಮತಿ ಶ್ರೀಮತಿದೇವಿ ಸಲ್ಲಿಸುವ ಭಾವ ನಮನ ಇದು] ಶ್ರೀಮತಿ ಶ್ರೀಮತಿದೇವಿ, ಮೈಸೂರು   “ಮಾಈ ತೂ ಜಾನತ ಹೋ ಮೇರೋ ಮನ ದರಸ ಬಿನ ತೋರೆ ಜಿಯಾ ಅಕುಲಾಯರಿ. ಬೀನ ಬಿರಾಜೆ ಮೇರೆ ಕಂಠಮೆ ಬಿಜುರಿಸಿ ಮೇರಿ ತಾನ ಸಾಜೆ ವಿಚಾರ ಕರೂ ನಿತ  ರೈನ ದಿನ ಘನೇರಿ” [ತಾಯೀ Read More

ಸದ್ಗುರು ಎಂಬ ಸ್ವರಮಹಾಸಾಗರ ನಮ್ಮ ಗುರು ಶ್ರೀ ನಾರಾಯಣ ಪಂಡಿತರು

– Ramakrishna Shanubhog ‘ಗುರು’ ಎಂಬ ಶಬ್ದದ ಪೂರ್ಣ ಆನಂದವನ್ನು ಅವರ ಜೊತೆಯಲ್ಲಿದ್ದು ಸವಿದ ಸುದೈವಿ ನಾನು. ಶರಾವತಿ ನದಿಯ ಒಂದು ತೀರ ಹೊನ್ನಾವರದಲ್ಲಿ ನನ್ನ ಮನೆ. ಆ ತೀರ ಕಾಸರಕೋಡಿನ ‘ಸ್ನೇಹಕುಂಜ’ದಲ್ಲಿ ನನ್ನ ಗುರುಗಳಾದ ನಾರಾಯಣ ಪಂಡಿತರ ವಿವೇಕಾನಂದ ಆರೋಗ್ಯಧಾಮ. ಸುಮಾರು 14 ವರ್ಷಗಳ ಹಿಂದೆ ನಾನು ಅವರನ್ನು ಮೊಟ್ಟ ಮೊದಲ ಬಾರಿ ಭೆಟ್ಟಿ ಆದೆ. ಸಂಗೀತದಲ್ಲಿ ತುಂಬಾ ಜ್ಞಾನಿ ಮತ್ತು ವಯಲಿನ್ ವಾದಕರೆಂದು ತಿಳಿದು ಚರ್ಚೆಗೆ ಹೋಗಿದ್ದೆ. ಸಿತಾರ ಮತ್ತು ಗಾಯನದ ಅಪೂರ್ಣ ಪ್ರವಾಸಗೈದ Read More

ಹಿಂದೂಸ್ಥಾನಿ ಸಂಗೀತದ ಎಲೆಮರೆಯ ಅಮೃತಫಲ – ಪಂ.ನಾರಾಯಣ್ ಪಂಡಿತ್

–ರವಿಕಿರಣ್ ಮಣಿಪಾಲ್. ಹಿಂದೂಸ್ಥಾನಿ ಸಂಗೀತ ಲೋಕ ಕಂಡ ಅಪ್ರತಿಮ ವಾಗ್ಗೇಯಕಾರ, ಅಪೂರ್ವ ದಾರ್ಶನಿಕ ಪಂ.ನಾರಾಯಣ ಪಂಡಿತ್(88ವರ್ಷ) ಮೊನ್ನೆ ಅಕ್ಟೋಬರ್ 13ರಂದು ಹೊನ್ನಾವರದ ಕಾಸರಕೋಡಿನ ಸ್ನೇಹಕುಂಜದಲ್ಲಿ ವಿಧಿವಶರಾದರು. ಆರೇಳು ವರ್ಷಗಳ ಹಿಂದಿನ ಮಾತು. ಪಂಡಿತ್ ಮಾಧವ ಭಟ್ ಗುರೂಜಿ ಸ್ವರ್ಗಸ್ಥರಾದ ಬಳಿಕ ಸೂಕ್ತ ಗುರುವಿನ ಹುಡುಕಾಟದಲ್ಲಿದ್ದೆ. ಒಂದು ದಿನ ರಾಗಧನ ಉಡುಪಿಯ ಖ್ಯಾತ ಸಂಗೀತಜ್ಞ, ವಿಮರ್ಶಕ  ಅರವಿಂದ ಹೆಬ್ಬಾರರ ಮನೆಯಲ್ಲಿ ಆಯೋಜಿಸಿದ್ದ ಪಂಡಿತ್ ನಾರಾಯಣ್ ಪಂಡಿತರ ಗಾಯನ- ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಹೋದೆ. ಸುಮಾರು 80 ವರ್ಷ ವಯಸ್ಸಿನ ವಯೋವೃಧ್ಧ Read More

Abhinava bhava bandish – by Dr. Sharada Bhat

ವೀ. ಅರವಿಂದ ಹೆಬ್ಬಾರ್ ಅನಾಹತ ನಾದವಾದ ನಾದಪಿಯಾ ನಾರಾಯಣ ಪಂಡಿತ್ ಜೀ ಅವರ ಹೆಸರು ಭಾರತದಲ್ಲಿ ಕೆಲವೇ ಕೆಲವರಿಗೆ ತಿಳಿದಿದೆ. ಹಿಂದುಸ್ಥಾನೀ ಕ್ಷೇತ್ರದಲ್ಲೂ ಅವರದು ಜನಪ್ರಿಯ ಹೆಸರೇನೂ ಅಲ್ಲ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಂತೂ ತಿಳಿದೇ ಇಲ್ಲ. ಹೀಗಿದ್ದೂ ನಾದ, ರಾಗ, ಭಾವ, ಸೌಂದರ್ಯದ ವಿಚಾರಕ್ಕೆ ಬಂದಾಗ ಎದ್ದು ನಿಲ್ಲಬಲ್ಲ ಹೆಸರು ಅಪೂರ್ವರಾದ ಈ ಋಷಿ ಗಂಧರ್ವರದು. ಅವರ ಬಗ್ಗೆ ರಾಗಧನಶ್ರೀಯು ಅವರ ನಿಧನಾ ನಂತರದಲ್ಲಿ ಅವರ ಬಗೆಗಿನ ಪೂರ್ಣ ವಿವರಗಳನ್ನು ಹೊತ್ತಿರುವ 24 ಪುಟಗಳ ಸಂಚಿಕೆಯನ್ನು ಈಗ Read More