January 2015 (Published in Ragadhanashree under “Namma Maatu”) 2015 ಕ್ಕೆ ಕಾಲಿಟ್ಟಿದ್ದೇವೆ. ಸಂಗೀತ ಲೋಕದಿಂದ ಇಂದು ನಾವು ಆರ್. ಕೆ. ಶ್ರೀಕಂಠನ್( 1920- 2014), ಮೆಂಡೊಲಿನ್ ಶ್ರೀನಿವಾಸ್( 1969- 2014), ನೇದುನುರಿ(1927- 2014), ಹಿರಿಯ ಸಂಗೀತ ವಿಮರ್ಶಕ ಎಸ್‍ವಿಕೆ ಎಂದೇ ಖ್ಯಾತರಾದ ಎಸ್.ವಿ.ಕೃಷ್ಣಮೂರ್ತಿ( 1925- 2014) ಇವರನ್ನು ಕಳಕೊಂಡಿದ್ದೇವೆ. ಸಾಂಪ್ರದಾಯಿಕ ಸಂಗೀತವನ್ನು ಕೇಳಲು ಇನ್ನು ಮೇಲೆ ಅವರುಗಳ ಸಿಡಿ ಯೇ ನಮಗೆ ಆಧಾರ. ಸಂಗೀತ ಪ್ರಪಂಚಕ್ಕೆ ಇವರು ನೀಡಿದ ಕೊಡುಗೆ ಅಪಾರ. ವಯೋ ವೃದ್ಧರಾಗಿ Read More
ಶಾಸ್ತ್ರೀಯ ಸಂಗೀತ ಶಾಸ್ತ್ರಿಗಳಿಗೆ ಬಂತು ಸಂಚಕಾರ
ಮದರಾಸಿನ ಮ್ಯೂಸಿಕ್ ಅಕಾಡೆಮಿಯಲ್ಲಿ ಪ್ರಾಯೋಜಿತ ಕಾರ್ಯಕ್ರಮವೊಂದು ಇತ್ತೀಚೆಗೆ ನಡೆದಿದೆ. ಸಾವಿರ ರೂಪಾಯಿ, ಎರಡು ಸಾವಿರ ರೂಪಾಯಿ ಗಳಿಗೂ ಹೆಚ್ಚಿನ ಮೌಲ್ಯದ ಟಿಕೇಟುಗಳು ಪ್ರವೇಶಾತಿಗೆ ! ಕಿಕ್ಕಿರಿದ ಜನ ಸ್ತೋಮ! ಟಿಕೆಟ್ಟಿಲ್ಲದೇ ವಾಪಾಸಾದವರೇ ಸಾವಿರಗಟ್ಟಲೆ! ಕಾರ್ಯಕ್ರಮ ಯಾರದೆಂದು ಗೊತ್ತೇ? ರಂಜನಿ ಗಾಯತ್ರಿ ಮತ್ತು ಹರೀಶ್ ಶಿವರಾಮಕೃಷ್ಣನ್ ಅವರ ಜುಗಲಬಂದಿ! ರಂಜನಿ ಗಾಯತ್ರಿ ಯಾರೆಂದು ನಾನು ನಿಮಗೆ ಹೇಳಬೇಕಿಲ್ಲ. ಕರ್ನಾಟಕ ಸಂಗೀತದ ಅಪ್ಪಟ ಸೊತ್ತು ಎಂದೇ ಹೆಸರು ಮಾಡಿದ ಈ ಇಬ್ಬರು ಸೋದರಿಯರ ಎದುರು ನಿಲ್ಲುವ ತ್ರಾಣ ಸದ್ಯ ಇನ್ಯಾರಿಗೂ Read More