ಶಾಸ್ತ್ರೀಯ ಸಂಗೀತವನ್ನು ನಾವು ಯಾರಿಗಾಗಿ ಹಾಡಬೇಕು?

ಹಿಂದೆ, ತೋಡಿ ಸೀತಾರಾಮಯ್ಯ ಎಂಬವರೊಬ್ಬರು ಒಂದು ವಾರ ತೋಡಿ ರಾಗ ಹಾಡಿದ್ದರಂತೆ. ಅವರು ತಮ್ಮ ಅಂತರಂಗದಲ್ಲಿದ್ದ ತೋಡಿಯನ್ನು ಮೊಗೆದು ಮೊಗೆದು ತೋಡಿಕೊಂಡಿದ್ದರಂತೆ. ಹಿಂದಿನ ಸಂಗೀತಗಾರರು ತಮ್ಮ ಮನೆಯಲ್ಲೋ, ಜಮೀನ್ದಾರನ ಮನೆಯಲ್ಲೋ ತಮಗೆ ಬೇಕಾದ ಹಾಗೆ ಮನಬಿಚ್ಚಿ ಹಾಡುತ್ತಿದ್ದರಂತೆ. ದಿನಕ್ಕೆ ಇಂತಿಷ್ಟು ಹೊತ್ತು ಎಂದಿಲ್ಲ. ಲಹರಿ ಹಿಡಿದಂತೆ ಆ ದಿನದ ರಾಗ. ಮುಗಿಯದೇ ಹೋದರೆ ಮರುದಿನ ಸಂಧ್ಯಾವಂದನೆಯ ಬಳಿಕ ಮತ್ತೆ ಮುಂದುವರಿಕೆ. ಜಮೀನ್ದಾರನಿಂದ ಬೇಕಾದಷ್ಟು ಸಂಭಾವನೆ, ಖಿಲ್ಲತ್ತು, ಕಡಗ, ಪುರಸ್ಕಾರ, ಆ ಸಂಗೀತಗಾರನಿಗೆ ಇದರಿಂದ ಸಂದದ್ದು ಇದೆ. “ಶ್ರುತಿ ಎಷ್ಟು? ದುಡ್ಡು ಎಷ್ಟು?” ಸಂಗೀತವನ್ನು ಸಭಾ ಕಚೇರಿಯ ಚೌಕಟ್ಟಿಗೆ ಒಳಪಡಿಸಿದ ಮೇಲೆ ಇಂತಿಷ್ಟು ಸಮಯವನ್ನು ನಿಗದಿಗೊಳಿಸಿದರಂತೆ. ಆಗ ಇಂತಿಷ್ಟು ಸಂಭಾವನೆಯನ್ನು ...
Read More

ಒಂದು ಊರು ಒಳ್ಳೆಯದಾಗಬೇಕಾದರೆ…

ಒಂದು ಊರು ಒಳ್ಳೆಯದಾಗಬೇಕಾದರೆ ಆ ಊರಿನಲ್ಲಿ ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂದು ನಾವು ಅಂದುಕೊಳ್ಳುತ್ತೇವೆ. ಇದಕ್ಕೆ ಸಾಕ್ಷಿಯಾಗಿ ರಾಮಾಯಣದ ರಾಮರಾಜ್ಯದ ಕಲ್ಪನೆ ನಮ್ಮ ಮುಂದೆ ಬರುತ್ತದೆ. ರಾಮರಾಜ್ಯದಲ್ಲಿ ಎಲ್ಲರೂ ಒಳ್ಳೆಯವರೇ ಆದರೆ ರಾಮನಿಗೆ ರಾಮನ ಆಡಳಿತ ಅದೆಷ್ಟು ಸುಲಭ? ಹೀಗಿದ್ದರೆ ರಾಮನ ಅವಶ್ಯಕತೆಯಿದೆಯೇ? ಎಲ್ಲರೂ ಸುಖಪಟ್ಟುಕೊಂಡು ಸಾರ್ಥಕತೆಯನ್ನು ಕಂಡುಕೊಳ್ಳುವುದಾದರೆ ಆಡಳಿತವನ್ನು ಮಾಡುವುದಕ್ಕಾದರೂ ಏನಿದೆ? ಒಂದು ಊರು ಕೆಟ್ಟಿದೆ ಎನ್ನಬೇಕಾದರೆ ಅಲ್ಲಿ ಕೆಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಅರ್ಥವೇ? ಇರಲಾರದು. ನನಗೆ ಅನಿಸುವಂತೆ ಒಂದು ಊರು ಕೆಟ್ಟದಾಗುವುದಕ್ಕೆ ‘ಒಳ್ಳೆಯವರೇ’ ಕಾರಣ ಎಂದು. ಯಾಕೆಂದರೆ ಒಳ್ಳೆಯವರು ತಮ್ಮ ‘ಜಾಣ ಮೌನ’ದಿಂದ ಕೆಟ್ಟವರ ಅಥವಾ ಕೆಟ್ಟುಹೋದುದರ ಬಗ್ಗೆ ಟೀಕಿಸದೆ ಅಥವಾ ವಿಮರ್ಶಿಸದೇ ಇದ್ದುದೇ ...
Read More

ಈಗ ‘ಚಿಂತಿಸ್ತುನ್ನಾಡೆ ಯಮುಡು’?

January 2015 (Published in Ragadhanashree under “Namma Maatu”) 2015 ಕ್ಕೆ ಕಾಲಿಟ್ಟಿದ್ದೇವೆ. ಸಂಗೀತ ಲೋಕದಿಂದ ಇಂದು ನಾವು ಆರ್. ಕೆ. ಶ್ರೀಕಂಠನ್( 1920- 2014), ಮೆಂಡೊಲಿನ್ ಶ್ರೀನಿವಾಸ್( 1969- 2014), ನೇದುನುರಿ(1927- 2014), ಹಿರಿಯ ಸಂಗೀತ ವಿಮರ್ಶಕ ಎಸ್‍ವಿಕೆ ಎಂದೇ ಖ್ಯಾತರಾದ ಎಸ್.ವಿ.ಕೃಷ್ಣಮೂರ್ತಿ( 1925- 2014) ಇವರನ್ನು ಕಳಕೊಂಡಿದ್ದೇವೆ. ಸಾಂಪ್ರದಾಯಿಕ ಸಂಗೀತವನ್ನು ಕೇಳಲು ಇನ್ನು ಮೇಲೆ ಅವರುಗಳ ಸಿಡಿ ಯೇ ನಮಗೆ ಆಧಾರ. ಸಂಗೀತ ಪ್ರಪಂಚಕ್ಕೆ ಇವರು ನೀಡಿದ ಕೊಡುಗೆ ಅಪಾರ. ವಯೋ ವೃದ್ಧರಾಗಿ ಸಂಗೀತ ಸೇವೆ ಮಾಡುವಷ್ಟು ಮಾಡಿ ದಣಿದ ಜೀವಗಳೆರಡು- ಶ್ರೀಕಂಠನ್ ಮತ್ತು ನೇದುನುರಿಯವರು. ತಮ್ಮ ಜೀವನದುದ್ದಕ್ಕೂ ಸಾಧನೆ, ಶಿಸ್ತು, ಪರಂಪರಾಗತ ಸಂಗೀತ ...
Read More

ಶಾಸ್ತ್ರೀಯ ಸಂಗೀತ ಶಾಸ್ತ್ರಿಗಳಿಗೆ ಬಂತು ಸಂಚಕಾರ

ಮದರಾಸಿನ ಮ್ಯೂಸಿಕ್ ಅಕಾಡೆಮಿಯಲ್ಲಿ ಪ್ರಾಯೋಜಿತ ಕಾರ್ಯಕ್ರಮವೊಂದು ಇತ್ತೀಚೆಗೆ ನಡೆದಿದೆ.  ಸಾವಿರ ರೂಪಾಯಿ, ಎರಡು ಸಾವಿರ ರೂಪಾಯಿ ಗಳಿಗೂ ಹೆಚ್ಚಿನ ಮೌಲ್ಯದ ಟಿಕೇಟುಗಳು ಪ್ರವೇಶಾತಿಗೆ ! ಕಿಕ್ಕಿರಿದ ಜನ ಸ್ತೋಮ! ಟಿಕೆಟ್ಟಿಲ್ಲದೇ ವಾಪಾಸಾದವರೇ ಸಾವಿರಗಟ್ಟಲೆ!  ಕಾರ್ಯಕ್ರಮ ಯಾರದೆಂದು ಗೊತ್ತೇ? ರಂಜನಿ ಗಾಯತ್ರಿ ಮತ್ತು ಹರೀಶ್ ಶಿವರಾಮಕೃಷ್ಣನ್ ಅವರ ಜುಗಲಬಂದಿ! ರಂಜನಿ ಗಾಯತ್ರಿ ಯಾರೆಂದು ನಾನು ನಿಮಗೆ ಹೇಳಬೇಕಿಲ್ಲ. ಕರ್ನಾಟಕ ಸಂಗೀತದ ಅಪ್ಪಟ ಸೊತ್ತು ಎಂದೇ ಹೆಸರು ಮಾಡಿದ ಈ ಇಬ್ಬರು ಸೋದರಿಯರ ಎದುರು ನಿಲ್ಲುವ ತ್ರಾಣ ಸದ್ಯ ಇನ್ಯಾರಿಗೂ ಇಲ್ಲವಾಗಿದೆ. ಅವರ ಸಂಗೀತ ಸಾಮರ್ಥ್ಯ, ಅದರ ಪ್ರಸ್ತುತಿ, ಕೃತಿಗಳ ಆಯ್ಕೆ,ಶ್ರೋತೃಗಳನ್ನು ಸದಾ ಎಚ್ಚರದಲ್ಲಿರುವಂತೆ ಮಾಡುವ  ಅವರ ಅದ್ಭುತ ಚಳಕ, ಮುಂದೆ ...
Read More