2015 ರ ಸಾಲಿನಲ್ಲಿ ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು ಚೆನ್ನೈ, ಉಡುಪಿ ಮತ್ತು ಮಂಗಳೂರಿನಲ್ಲಿ ನಡೆದಿವೆ. ರಂಜನಿ ಗತಿಸಿ ಹೋದ ದಿನ ಜೂನ್ 9ಕ್ಕೆ ಇನ್ನು ಪ್ರತಿ ವರ್ಷ ಚೆನ್ನೈನಲ್ಲಿ, ಮೈಲಾಪುರದ ರಾಗಸುಧಾ ಹಾಲ್‍ನಲ್ಲಿ ರಂಜನಿ ಸಂಸ್ಮರಣಾ ಕಛೇರಿ ನಡೆಯಲಿದೆ. ಇದರ ಪ್ರಾಯೋಜಕರು ಡಾ. ಎನ್. ರಾಜಗೋಪಾಲನ್, ಚೆನ್ನೈ ಇವರು. ರಂಜನಿಯ ಪರಮ ಅಭಿಮಾನಿ. 85 ವರ್ಷದ ಈ ಹಿರಿಯರು ತಮ್ಮ ತಂದೆ-ತಾಯಿಯರ ಹೆಸರಿನಲ್ಲಿ ರಂಜನಿಯ ನೆನಪಿಗಾಗಿ 1 ಲಕ್ಷ ರೂಪಾಯಿ ದತ್ತಿ ನಿಧಿಯನ್ನು ಸ್ಥಾಪಿಸಿ ಪ್ರತಿ Read More
ಮಂಗಳೂರಿನಲ್ಲಿ ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2015
ಸಪ್ಟೆಂಬರ್ 10 ರಂದು ಮಂಗಳೂರಿನ ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ವತಿಯಿಂದ ರಂಜನಿ ಸಂಸ್ಮರಣ ಕಾರ್ಯಕ್ರಮವಾಗಿ ಶ್ರೀ ಪಿ. ನಿತ್ಯಾನಂದ ರಾವ್ ಅವರು ಶಾರದಾ ವಿದ್ಯಾಲಯದಲ್ಲಿ ಕು. ಅರ್ಚನಾ – ಸಮನ್ವಿಯವರ ದ್ವಂದ್ವ ಹಾಡುಗಾರಿಕೆಯನ್ನು ಪ್ರಸ್ತುತ ಪಡಿಸಿದ್ದರು. ಈ ಚಿಕ್ಕವರಿಬ್ಬರೂ ಸಾವೇರಿ ವರ್ಣದ ಜತೆಗೆ ಬಹುಬೇಗನೆ ಕುದುರಿಕೊಂಡರು. ನೆಗಡಿಯಿಂದ ಆತಂಕಗೊಂಡ ಗಂಟಲು ವೇದಿಕೆಯ ಮೇಲೆ ತನ್ನ ಇರವನ್ನು ತೋರಗೊಡಲಿಲ್ಲ. ಒಂದು ಪುಟ್ಟ, ಆದರೆ ಅಂzವÁದ ನೇಯ್ಗೆಯೊಂದಿಗೆ ಊತ್ತುಕ್ಕಾಡು ವೆಂಕಟಕವಿಯವರ ಪ್ರಣವಾಕಾರಂ ಎಂಬ ಆರಭಿ ರಾಗದ ಕೃತಿ ಪ್ರೌಢವಾಗಿ ಮೂಡಿ Read More
ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2015 ರಾಗಧನ,ಉಡುಪಿ
ಸೆಪ್ಟೆಂಬರ 9, 2015 ರಂಜನಿಯ 33 ನೆಯ ಹುಟ್ಟು ಹಬ್ಬದ ದಿನ. ಆ ಪ್ರಯುಕ್ತ ಉಡುಪಿಯಲ್ಲಿ ಎರಡು ಸಂಸ್ಥೆಗಳು ಸಂಸ್ಮರಣ ಕಛೇರಿಗಳನ್ನು ನಡೆಸಿದವು. ಸೆಪ್ಟೆಂಬರ 5ರಂದು ಉಡುಪಿಯ ರಾಗಧನ ಸಂಸ್ಥೆಯು ಸರಿಗಮ ಭಾರತಿ, ಪರ್ಕಳ ಇವರ ¸ಹÀಭಾಗಿತ್ವದಲ್ಲಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಕಛೇರಿ ಏರ್ಪಡಿಸಿತ್ತು. ಚೆನ್ನೈನ ರಾಜೇಶ ಕೆ.ಜಿ. ವಯಲಿನ್‍ನಲ್ಲೂ ಬೆಂಗಳೂರಿನ ಅಕ್ಷಯ ಆನಂದ್ ಮೃದಂಗದಲ್ಲೂ, ಶಿವರಾಮ ಕೃಷ್ಣನ್ ಖಂಜೀರದಲ್ಲೂ ಸಹಕರಿಸಿದ್ದರು. ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕೃಷ್ಣಾಷ್ಟಮಿಯ ದಿನ ನಡೆದ ಈ ಕಛೇರಿಯಲ್ಲಿ ಪ್ರಾರ್ಥನಾ ಅತ್ಯಂತ Read More
ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2015 ರಂಜನಿ ಮೆಮೋರಿಯಲ್ ಟ್ರಸ್ಟ್, ಉಡುಪಿ
ಸೆಪ್ಟೆಂಬರ 6ರಿಂದ 9ರ ವರೆಗೆ ರಂಜನಿ ಮೆಮೋರಿಯಲ್ ಟ್ರಸ್ಟ್‍ನ ವತಿಯಿಂದ ರಂಜನಿ ಸಂಸ್ಮರಣ ಸಂಗೀತ ಕಾರ್ಯಕ್ರಮಗಳು ಏರ್ಪಟ್ಟವು. ಸೆಪ್ಟೆಂಬರ 6 ರಂದು ನಾಲ್ಕು ಕಛೇರಿಗಳು ಮಣಿಪಾಲದ ಕೌನ್ಸಲಿಂಗ್ ಹಾಲ್‍ನಲ್ಲಿ ನಡೆದವು. ಬೆಳಗಿನ ಕಛೇರಿ – ಕು. ಅರ್ಚನಾ – ಸಮನ್ವಿ ದ್ವಂದ್ವ ಹಾಡುಗಾರಿಕೆ ಮತ್ತು ಶ್ರೀಮತಿ ಲತಾ ತಂತ್ರ್ರಿಯವರ ಹಾಡುಗಾರಿಕೆ. ಮಧ್ಯಾಹ್ನದ ನಂತರ – ಕು. ಗಾರ್ಗಿ ಶಬರಾಯ ಅವರ ಹಾಡುಗಾರಿಕೆ ಮತ್ತು ಶ್ರೀ ಅಶ್ವಿನ್ ಆನಂದ್ ಅವರ ವೀಣಾ ವಾದನ. ಕು. ಅರ್ಚನಾ – ಸಮನ್ವಿ Read More