ಸೆಪ್ಟೆಂಬರ 9, 2015 ರಂಜನಿಯ 33 ನೆಯ ಹುಟ್ಟು ಹಬ್ಬದ ದಿನ. ಆ ಪ್ರಯುಕ್ತ ಉಡುಪಿಯಲ್ಲಿ ಎರಡು ಸಂಸ್ಥೆಗಳು ಸಂಸ್ಮರಣ ಕಛೇರಿಗಳನ್ನು ನಡೆಸಿದವು. ಸೆಪ್ಟೆಂಬರ 5ರಂದು ಉಡುಪಿಯ ರಾಗಧನ ಸಂಸ್ಥೆಯು ಸರಿಗಮ ಭಾರತಿ, ಪರ್ಕಳ ಇವರ ¸ಹÀಭಾಗಿತ್ವದಲ್ಲಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಕಛೇರಿ ಏರ್ಪಡಿಸಿತ್ತು. ಚೆನ್ನೈನ ರಾಜೇಶ ಕೆ.ಜಿ. ವಯಲಿನ್‍ನಲ್ಲೂ ಬೆಂಗಳೂರಿನ ಅಕ್ಷಯ ಆನಂದ್ ಮೃದಂಗದಲ್ಲೂ, ಶಿವರಾಮ ಕೃಷ್ಣನ್ ಖಂಜೀರದಲ್ಲೂ ಸಹಕರಿಸಿದ್ದರು. ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕೃಷ್ಣಾಷ್ಟಮಿಯ ದಿನ ನಡೆದ ಈ ಕಛೇರಿಯಲ್ಲಿ ಪ್ರಾರ್ಥನಾ ಅತ್ಯಂತ ಪ್ರೌಢ ಹಾಗೂ ಸಾಂಪ್ರದಾಯಿಕವಾದ ಹಾಡುಗಾರಿಕೆಯನ್ನು ನೀಡಿದ್ದರು. ಆಕೆ ನೀಡಿದ ಶಹನ (ಈ ವಸುಧಾ), ಕಲ್ಯಾಣ ವಸಂತ (ಕನುಲು ತಾಕನಿ) ಮತ್ತು ಕಾಂಬೋಜಿ (ಓ ರಂಗ ಶಾಯಿ), ಮತ್ತೆ ಮತ್ತೆ ಮರುಕಳಿಸಿ ಕೇಳಬೇಕಾದದ್ದು. ಶಹನ ರಾಗದ ಸ್ವರ ಶುದ್ಧತೆ, ಅಕಾರಗಳ ಮೇಲಿನ ಹಿಡಿತ ಮತ್ತು ಓಟದಲ್ಲಿ ಸ್ಪಷ್ಟತೆ ಮನನೀಯ. ಒಂದೇ ಉಸಿರಿನಲ್ಲಿ ಬರುವ ಹೃಸ್ವ ಸ್ವರಗಳ ಮಾಲೆ ಅವರ ವಿದ್ವತ್ತಿಗೆ ನೀqುÀವ ಕಿರೀಟ. ತಾಳದ ಎಡುಪ್ಪಿಗೆ ಬಂದು ನಿಲ್ಲುವುದಕ್ಕೆ ತ್ರಾಸ ಪಡುತ್ತಿದ್ದ ರಾಜೇಶ್ ರಾಗಾಲಾಪನೆ ಮತ್ತು ನೆರವಲ್ ಭಾಗಗಳನ್ನು ಚೆನ್ನಾಗಿ ನಿರ್ವಹಿಸಬಲ್ಲರು. ಅಕ್ಷಯ ಆನಂದ ಅವರ ಮೃದಂಗ ನುಡಿಸಾಣಿಕೆಯಲ್ಲಿ ಪ್ರೌಢತೆ ಮತ್ತು ತಾಳ ಲಯಗಳ ವಿನಿಕೆಗಳು ಎದ್ದೆದ್ದು ಕಾಣುತ್ತವೆ. ನುಡಿಸಾಣಿಕೆಯಲ್ಲಿ ತುಸು ಮೃದುತ್ವ ಮತ್ತು ಪ್ರಾರ್ಥನಾ ನೀಡುವ ಕಾರ್ವೆ ಸ್ಥಾನಗಳಲ್ಲಿ ಸಾಕಷ್ಟು ವಿಶ್ರಾಂತಿಯನ್ನು ಬಳಸಿಕೊಳ್ಳುವಂತಿದ್ದರೆ ¸ಂÀಗೀತದ ಆಶಯಕ್ಕೆ ಹೆಚ್ಚು ಇಂಬು ದೊರಕಿದಂತಾಗಬಹುದು.

Leave a Reply

Your email address will not be published. Required fields are marked *