ಸೆಪ್ಟೆಂಬರ 6ರಿಂದ 9ರ ವರೆಗೆ ರಂಜನಿ ಮೆಮೋರಿಯಲ್ ಟ್ರಸ್ಟ್‍ನ ವತಿಯಿಂದ ರಂಜನಿ ಸಂಸ್ಮರಣ ಸಂಗೀತ ಕಾರ್ಯಕ್ರಮಗಳು ಏರ್ಪಟ್ಟವು. ಸೆಪ್ಟೆಂಬರ 6 ರಂದು ನಾಲ್ಕು ಕಛೇರಿಗಳು ಮಣಿಪಾಲದ ಕೌನ್ಸಲಿಂಗ್ ಹಾಲ್‍ನಲ್ಲಿ ನಡೆದವು. ಬೆಳಗಿನ ಕಛೇರಿ – ಕು. ಅರ್ಚನಾ – ಸಮನ್ವಿ ದ್ವಂದ್ವ ಹಾಡುಗಾರಿಕೆ ಮತ್ತು ಶ್ರೀಮತಿ ಲತಾ ತಂತ್ರ್ರಿಯವರ ಹಾಡುಗಾರಿಕೆ. ಮಧ್ಯಾಹ್ನದ ನಂತರ – ಕು. ಗಾರ್ಗಿ ಶಬರಾಯ ಅವರ ಹಾಡುಗಾರಿಕೆ ಮತ್ತು ಶ್ರೀ ಅಶ್ವಿನ್ ಆನಂದ್ ಅವರ ವೀಣಾ ವಾದನ.

ಕು. ಅರ್ಚನಾ – ಸಮನ್ವಿ ಅವರ ಹಾಡುಗಾರಿಕೆಯಲ್ಲಿ ಎಲ್ಲರೂ ಗಮನಿಸಿದ ಅಂಶವನ್ನಷ್ಟೇ ಇಲ್ಲಿ ಬರೆಯುತ್ತೇನೆ – ಒಳ್ಳೆಯ ಪಾಠಾಂತರ, ಸಮರ್ಪಕ ವೇದಿಕೆ ನಿರ್ವಹಣೆ ಮತ್ತು ವೃತ್ತಿ ಪgತÉ, ಸೂಕ್ತ ¸ವÀುಯಕ್ಕೆ ಸಮರ್ಪಕವಾದ ರಾಗ ವಿಸ್ತಾರ, ಸ್ವರ ವಿನ್ಯಾಸ, ಪ್ರಬುದ್ಧ ನೆರವಲ್ ಮತ್ತು ವಯಸ್ಸಿಗೆ ಮೀರಿದ ಕೌಶಲ ಪೂರ್ಣವಾದ ಕಸುಬುಗಾರಿಕೆ. ಹರಿಕಾಂಬೋಜಿಯ ಚಿಕ್ಕವನೇ ಇವನು ಎಂಬ ಪುರಂದರ ದಾಸರ ಪ್ರಸ್ತುತಿಯು ದೊಡ್ಡ ವಾಗ್ಗೇಯಕಾರರ ಕೃತಿಯ ಮಟ್ಟಕ್ಕೆ ತಲುಪಿರುವುದನ್ನು ಎಲ್ಲರೂ ಗಮನಿಸಿದರು. ಶುದ್ಧ ಸಾವೇರಿಯ ದಾರಿ ನೀ ತೆಲುಸು ಕೊಂಟಿಯ ªೀÉಗ ತುಸು PಡಿÀಮೆಯಾದಂತೆ ಅನಿಸಿತು. ವಾಗಧೀಶ್ವರಿಯ ಪರಮಾತ್ಮುಡುವಿನ ನಿರ್ವಹಣೆ ಅತ್ಯುತ್ತಮ. ಹಂಸಾನಂದಿಯಲ್ಲಿ ಹಾಡಿದ ರಂಗಯ್ಯ ನಿನ್ನ ಯಾರೇನೆಂದರೋ ಎಂಬ ಪುರಂದರ ದಾಸರ ದೇವರ ನಾಮದ ಕೊನೆಯಲ್ಲಿ ಮಕ್ಕಳಿಬ್ಬರೂ ಹಾಕಿದ ಬಿರುಸಿನ ತಾನ್‍ಗಳನ್ನು ಕೇಳಿ ಎಲ್ಲರೂ ಅಚ್ಚರಿಗೊಂಡುದುದು ಸತ್ಯ. ವಯಲಿನ್‍ನಲ್ಲಿ ರಾಜೇಶ್ ಹಾಗೂ ಮೃದಂಗದಲ್ಲಿ ಸಾಯಿ ಶಿವು, ಖಂಜೀರದ ಶಿವರಾಮ ಕೃಷ್ಣನ್ ಅವರು ಹಿತಮಿತವಾದ ಸಾಥಿ ನೀಡಿ ಸಹಕರಿಸಿದ್ದರು.

ಲತಾ ತಂತ್ರಿಯವರ ಹಾಡುಗಾರಿಕೆ ತುಸು ಹಳೆಯ ಸರಕು ಎನ್ನಿಸುವಂತದ್ದು. ಅದರಲ್ಲಿ ನಿಷ್ಠೆಯಿಂದ ಮಾಡಿದ ಯಮ ಸಾಧನೆಯ ಫಲ ಕಾಣುತ್ತದೆ. ರಂಜನಿ ರಾಗವನ್ನು ಅವರು ವಿಸ್ತರಿಸಿದ ರೀತಿ ತುಂಬಾ ಸೊಗಸಾದುದು. ಖರಹರಪ್ರಿಯದ ಪ್ರಸ್ತುತಿಯಲ್ಲೂ ಅದೇ ಕಾಲ ಪ್ರಮಾಣ ಮತ್ತು ನಿಧಾನ. ಎಲ್ಲೂ ಅವಸರಕ್ಕೆ ಎಡೆಯಿಲ್ಲ. ಧ್ವನಿ ಪರಿಣಾಮದ ಕಡೆಗೆ ಹೆಚ್ಚಿನ ಗಮನ ನೀಡಿದರೆ ಲತಾ ಅವರ ಹಾಡುಗಾರಿಕೆ ಶ್ರೇಷ್ಠ ಮಟ್ಟಕ್ಕೆ ತಲುಪುವುದರಲ್ಲಿ ಸಂದೇಹವೇ ಇಲ್ಲ. ಕಛೇರಿಯ ಮಟ್ಟವನ್ನು ಏರಿಸುವುದರಲ್ಲಿ ಸಮಪಾಲು ವಯಲಿನ್ ರಾಜೇಶ್ ಅವರದು ಹಾಗೂ ಮೃದಂಗ ಅಕ್ಷಯ ಆನಂದ್ ಅವರದು.

ಗಾರ್ಗಿ – ವಿಶ್ವಜಿತ್ – ಸಾಯಿ ಶಿವು ಅವರ ಕಛೇರಿ ಅತ್ಯಂತ ಹೆಚ್ಚಿನÀ ಜನಮನ್ನಣೆ ಪಡೆಯಿತು. ಕಾನಡ ರಾಗದ ಅಟತಾಳದ ವರ್ಣದಿಂದ ತೊಡಗಿ ಕೊನೆಯ ಹೀರನ್ನಾ (ಕಬೀರ್ ಭಜನ್) ದವರೆಗೂ ಆಕೆ ಶ್ರೋತೃಗಳನ್ನು ಹಿಡಿದಿಟ್ಟ ಬಗೆ ಅನುಪಮವಾದದ್ದು. ಮುಖಾರಿಯ ರಾಗಾಲಾಪನೆ ಎಂತ ನಿ ನೇ ಪ್ರಸ್ತುತಿ ಅಷ್ಟೂ ಚೊಕ್ಕಟ. ತೋಡಿ ರಾಗದ ಮಿಶ್ರ ಝಂಪೆ ತಾಳದ ದಾಚು ಕೋವಲೇನದ ನಿರ್ವಹಣೆಯು ಈ ಹಿಂದೆ ಈ ಕೃತಿಯನ್ನು ಹಾಡಿದ್ದ ರಂಜನಿಯನ್ನು ನೆನಪಿಸುವಂತಿತ್ತು. ವಿಶ್ವಜಿತ್ ಅವರ ಮುಖಾರಿ ಮತ್ತು ತೋಡಿಗಳು ಪ್ರಬುದ್ಧ ಮಟ್ಟದಲ್ಲಿದ್ದವು. ಮೃದಂಗದ ಶಿವು ಅವರದ್ದು ಹಿತ ಮಿತ ನಡಿಗೆ. ಕೊನೆಯಲ್ಲಿ ಹಾಡಿದ ಹೀರನ್ನಾ ಮಾತ್ರ ಕಾಫಿ ಚಹಾ ಹೀರುವ ಸ್ಥಳದಲ್ಲೂ ಎಲ್ಲರ ಬಾಯಿಂದಲೂ ಅದು ಮತ್ತೆ ಮತ್ತೆ ಅನುರಣಿಸುತ್ತಿತ್ತು.

ದಿನದ ಕೊನೆಯ ಕಛೇರಿ ಶ್ರೀ ಅಶ್ವಿನ್ ಆನಂದ್ ಅವರ ವೀಣಾ ವಾದನ. ಸೌಖ್ಯವೇ ಪ್ರಧಾನ. ರಾಗ, ತಾಳ, ಲಯ ಶುದ್ಧತೆಯೇ ಪ್ರಮಾಣ. ಅಶ್ವಿನ್ ಅವರ ಕೈ ಕೌಶಲ ವೀಣೆಯ ಮೇಲೆ ಲೀಲಾಜಾಲ. ನೆªುÀ್ಮದಿಯ ಶಹ£,À ದ್ವಿಜಾವಂತಿ, ಕೇದಾರಗೌಳಗಳು. ಅತ್ಯಂತ ಮನೋಜ್ಞವಾದ ವಿನಿಕೆ ಶ್ರೀರಂಜನಿಯಲ್ಲಿ. ಕಲ್ಯಾಣಿಯ ಭಜರೇ ರೇ ಚಿತ್ತದ ಪ್ರಸ್ತುತಿ ಚಿತ್ತಾಪಹಾರಿ. ಅಶ್ವಿನ್ ನುಡಿಸುತ್ತಿದ್ದರೆ ಪಕ್ಕವಾದ್ಯಗಳೂ ಬೇಡವೆನಿಸುವಷ್ಟು ಮೌನವನ್ನು ಅರಸುತ್ತವೆ. ನಾದ ಲೋಕದ, ನಿಜ ಅರ್ಥದ ಅನಾಹತ ಧ್ವನಿಯನ್ನು ಪ್ರಾಯಶಃ ಅಶ್ವಿನ್ ಉಣಿಸಬಲ್ಲರು. ರಾಗ ನಿರೂಪಣೆಯಲ್ಲಿ ಅವರು ಬಳಸಿಕೊಳ್ಳುವ ಕಾಲ ಪ್ರಮಾಣ ಅನಿರ್ವಚನೀಯ. ಕೊನೆಗೂ ಕಿವಿಗೆ ಸಂಗೀತ ಇಂಪಾಗಿ ಕೇಳುವುದು ಕಾಲ ಪ್ರಮಾಣದ ಸಮರ್ಪಕ ನಿರ್ವಹಣೆಯಲ್ಲೇ ಎಂಬುದು ಅಶ್ವಿನ್ ಅವರ ವೀಣಾ ವಾದನ ಕೇಳಿದಾಗ ಅನುಭವವೇದ್ಯವಾಗುತ್ತದೆ. ಅಕ್ಷಯ ಆನಂದ ಅವರ ಮೃದಂಗ ವಾದನ ಚೆನ್ನಾಗಿತ್ತು.

ಈ ದಿನದ ಉದ್ಘಾಟನಾ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿz್ದÀ ಶ್ರೀಮತಿ ದೀಪಾ ಗಣೇಶ್ ಅವರು ಬಂದಿರಲಿಲ್ಲ. ಹಿರಿಯ ಪತ್ರಕರ್ತ ಹಾಗೂ ಕಲಾವಿಮರ್ಶಕರಾದ ಶ್ರೀ ಎ. ಈಶ್ವರಯ್ಯ ಅವರ ಉಪಸ್ಥಿತಿಯಲ್ಲಿ ಶ್ರೀ ಅರವಿಂದ ಹೆಬ್ಬಾರರು ರಂಜನಿ ಮೆಮೋರಿಯಲ್ ಟ್ರಸ್ಟ್‍ನ ಹುಟ್ಟು, ಆಶೋತ್ತರ ಹಾಗೂ ನಿಲುವುಗಳನ್ನು ಸ್ಪಷ್ಟವಾಗಿ ನಿರೂಪಿಸಿದgುÀ. ರಾಗಧನದ ಸಂಸ್ಥೆಯ ಅಡಿಯಲ್ಲಿ ತಾನು ಸಾವಿರಾರು ಕಛೇರಿಗಳ£ುÀ್ನ 25 ವರ್µÀಗಳ ಕಾಲ ಸಂಘಟಿಸಿದ್ದನ್ನು ನೆ£ಪಿÀಸಿಕೊಂಡು, ಇದೀಗ ಆ ಬಗ್ಗೆ ತನಗೆ ಹೆಚ್ಚು ಆಸ್ಥೆ ಇಲ್ಲದಿರುವುದನ್ನು ಪ್ರಕಟಿಸಿದರು. ಅದಕ್ಕಾಗಿ ತಾನು ಕಾರ್ಯದರ್ಶಿ ಹುದ್ದೆಯನ್ನು ತ್ಯಜಿಸಿದುದುನ್ನು ಸಭೆಗೆ ಸ್ಟಷ್ಟ ಪಡಿಸಿದರು. ಸಂಗೀತ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗಳನ್ನು ಮಾಡಬೇಕೆನ್ನುವವರಿಗೆ ಮತ್ತು ಮಾಡಿದವರಿಗೆ ತನ್ನಿಂದ ಆದ ಸಹಾಯ ಸಿಗಬೇಕೆಂಬ ಅಚಲ ನಿರ್ಧಾರವನ್ನು ಪ್ರಕಟಿಸಿದ ಅವರು ರಂಜನಿ ಮೆಮೋರಿಯಲ್ ಟ್ರಸ್ಟ್ ಸಾಂಘಿಕವಾದ ಕಾರ್ಯಕ್ರಮಗಳ ಬದಲು ವೈಯಕ್ತಿಕವಾಗಿ ನಿಷ್ಠೆಯಿಂದ ಸಾಧನೆ ಮಾಡುವ ಅರ್ಹ ಕಲಾವಿದರ ಏಳಿಗೆಗಾಗಿ ಶ್ರಮಿಸುವುದು ಎಂದು ಹೆಬ್ಬಾರರು ತಿಳಿಸಿದರು. “ಇದೊಂದು ಚಿಟಣಡಿuisಣiಛಿ ರೀತಿಯ ನಡೆ; ಇದು ಅತ್ಯಂತ ಪ್ರಜ್ಞಾವಂತ ಸಮಾಜದ ಕೊಡುಗೆ ಎನಿಸುವುದರಲ್ಲಿ ಸಂದೇಹವೇ ಇಲ್ಲ; ಇದಕ್ಕೆ ಪ್ರತೀ ಒಬ್ಬ ಪ್ರಜ್ಞಾವಂತ ಕಲಾ ರಸಿಕನೂ ಇಂತಹ ಆಶೋತ್ತರಗಳಿಗೆ ಬೆಂಬಲವಾಗಿ ನಿಂತು ತನ್ನಿಂದ ಯಾವ ರೀತಿಯ ಬೆಂಬಲವನ್ನು ಕೊಡಬಹುದೆಂಬುವುದನ್ನು ಗಂಭೀರವಾಗಿ ಚಿಂತಿಸಿ, ಹಾಗೆ ನಡೆದುಕೊಳ್ಳಬೇಕು” ಎಂಬುದಾಗಿ ಶ್ರೀ ಈಶ್ವರಯ್ಯನವರು ಬಹಳ ಮಾರ್ಮಿಕವಾಗಿ ತಿಳಿಸಿದರು. ಈ ಸಮಾರಂಭದ ಸಂದರ್ಭದಲ್ಲಿ ಮಣಿಪಾಲ ವಿಶ್ವ ವಿದ್ಯಾಲಯದ ಕಲ್ಚರಲ್ ಕೋ ಆರ್ಡಿನೇಶನ್ ಕಮಿಟಿಯ ಚೇರ್ ಪರ್ಸನ್ ಡಾ. ಶೋಭಾ ಯು. ಕಾಮತ್ ಅವರು ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ಸಂಗೀತದ ಪ್ರೌಢ ಶಿಕ್ಷಣಕ್ಕಾಗಿ ಕು. ಅರ್ಚನಾ ಮತ್ತು ಕು. ಸಮನ್ವಿಯವರಿಗೆ ತಲಾ ರೂ. 10,000 ದ ಶಿಷ್ಯ ವೇತನವನ್ನು ಟ್ರಸ್ಟ್ ಕೊಡಮಾಡಿತು. ಹಾಗೆÀಯೇ ತೀರ್ಥಹಳ್ಳಿಯ ಶಾಂತೇರಿ ಕಾಮತ್ ಅವರಿಗೆ ರೂ. 5,000 ಮೊತ್ತದ ಶಿಷ್ಯ ವೇತನವನ್ನು ಕೊಡುವುದಾಗಿ ಪ್ರಕಟಿಸಿತು. ಕು. ಗಾರ್ಗಿ ಶಬರಾಯ ಕಾರ್ಯಕ್ರಮ ನಿರೂಪಿಸಿದರು.

ಸೆಪ್ಟೆಂಬರ್ 7ನೇ ಮತ್ತು 8ನೇ ತಾರೀಕುಗಳಂದು ಕಾರ್ಯಕ್ರಮಗಳು ಲತಾಂಗಿಯಲ್ಲಿ ನಡೆದವು. 7ನೇ ತಾರೀಕು ಸಂಜೆ 5.30 ರಿಂದ 6.30 ರ ವರೆಗೆ ಕಡೈನಲ್ಲೂರಿನ ಶ್ರೀಮತಿ ಸುಬ್ಬುಲಕ್ಷ್ಮಿ ರಘುನಾಥ್ ದಾಸ್‍ಜೀ ಅವರ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಅನಾಯಾಸವಾಗಿ ಬರುವ ಆಕೆಯ ಅತ್ಯುತ್ತಮ ಶಾರೀರದ ಕಂಠಶ್ರೀ ಭಕ್ತಿ ರಸದಲ್ಲಿ ಮೀಯಿಸುವಂತಿತ್ತು. ತಬಲಾದಲ್ಲಿ ಸಹಕರಿಸಿದ ಮಾಧವಾಚಾರ್ಯ ಅವರದು ಅತ್ಯುತ್ತಮ ನಿರ್ವಹಣೆ. ಆ ಬಳಿಕ ಅರವಿಂದ ಹೆಬ್ಬಾರ್ ಮತ್ತು ಸುದರ್ಶನ್ ಅವರ ಮುಂದಾಳುತನದಲ್ಲಿ ಎರಡು ಗಂಟೆಗಳ ಕಾಲ ಸತ್ಸಂಗ ಭಜನಾ ಕಾರ್ಯಕ್ರಮ ನಡೆಯಿತು. ಎಲ್ಲರ ಸೌಹಾರ್ದ ಭಾಗವಹಿಸುವಿಕೆ ಅರ್ಥಪೂರ್ಣವಾಗಿತ್ತು. ಸೆಪ್ಟೆಂಬರ್ 8ನೇ ಮಂಗಳವಾರ ತೀರ್ಥಹಳ್ಳಿಯ ಶಾಂತೇರಿ ಕಾಮತ್ ಇವರಿಂದ ಹಿಂದೂಸ್ಥಾನೀ ಸಂಗೀತ ಪ್ರಸ್ತುತಿಗೊಂಡಿತು. ಪೂರಿಯಾ ಕಲ್ಯಾಣ್ ರಾಗದ ಎಲ್ಲಾ ಮಜಲುಗಳನ್ನು ಎಲ್ಲಾ ರೀತಿಯಲ್ಲೂ ಆರೈಕೆ ಮಾಡಿ ತಮ್ಮ ಪ್ರಾಯವನ್ನೂ ಮೀರಿ ನಿಂತ ಪ್ರೌಢಿಮೆಯನ್ನು ಶಾಂತೇರಿ ಪ್ರಕಟಿಸಿದರು. ಹಾರ್ಮೋನಿಯಂನಲ್ಲಿ ಶಿರ್ಸಿಯ ಭರತ್ ಹೆಗ್ಡೆ ಹಾಗೂ ತಬಲಾದಲ್ಲಿ ಧಾರವಾಡದ ಉದಯ ಕುಲಕರ್ಣಿ ಅವರು ಉತ್ತಮ ಸಹಕಾರ ನೀಡಿದ್ದರು. ಶಾಂತೇರಿಯವರ ರಾಗ, ಸ್ವರ, ತಾಳದ ವರಸೆಗಳ ಪ್ರಸ್ತುತಿಯಲ್ಲಿ ವೃತ್ತಿ ಪರತೆಯನ್ನು ಹೆಚ್ಚಾಗಿ ರೂಢಿಸಿಕೊಳ್ಳಬೇಕೆಂಬುದಾಗಿ ಹೆಬ್ಬಾರರು ತಿಳಿಸಿದರು.

ಸಪ್ಟೆಂಬರ್ 9, ರಂಜನಿಯ 33 ನೇ ಹುಟ್ಟುಹಬ್ಬದ ದಿನ. ಆ ದಿನದ ಸಂಜೆ 5.30ರ ವೇಳೆಗೆ ಮಣಿಪಾಲದ ಕೌನ್ಸೆಲಿಂಗ್ ಹಾಲ್ ನಲ್ಲಿ ನಡೆಸಿದ ಸಮಾರೋಪ ಸಮಾರಂಭದಲ್ಲಿ ಶ್ರೀಮಾನ್ ಈಶ್ವgಂÀiÀ್ಯುನವರು ಮುಖ್ಯ ಅಭ್ಯಾಗತರಾಗಿ ಹರಕೆಯ ನಲ್ನುಡಿಗಳನ್ನಾಡಿದರು. ಅರವಿಂದ ಹೆಬ್ಬಾರರು ಪ್ರಾಸ್ತಾವಿಕವಾಗಿ ನಾಲ್ಕು ಮಾತನ್ನಾಡಿದರೆ, ಕೆ. ಸದಾಶಿವರಾವ್ ಅವರು ವಂದಿಸಿದರು. ಶ್ರೀಮತಿ ಶಾರದಾ ಉಪಾಧ್ಯಾಯ ಅವರು ಕಾರ್ಯಕ್ರಮ ನಿರೂಪಿಸಿದ್ದರು. ಸಂಜೆ 6.30ಕ್ಕೆ ಚೆನ್ನೈನ ಶ್ರೀ ರವಿಕಿರಣ್ ಅವರ ಚಿತ್ರವೀಣಾ ಕಚೇರಿ. ಅಕ್ಕರೈ ಶುಭಲಕ್ಷ್ಮಿ ಅವರ ವಯಲಿನ್, ಕೆ. ಯು. ಜಯಚಂದ್ರ ರಾವ್ ಅವರ ಮೃದಂಗ ಮತ್ತು ಭಾರ್ಗವ ಹಾಲಂಬಿ ಅವರ ಖಂಜೀರ. ರಾಗ ಲಕ್ಷ್ಯ-ಲಕ್ಷಣಗಳ ಬಗ್ಗೆ ಅಪಾರ ಅನುಭವ ಪಾಂಡಿತ್ಯ ಇರುವ ರವಿಕಿರಣ್ ಅವರು ಸಂಗೀತದÀ ವ್ಯಾಕರಣ ಹಾಗೂ ತಾಳದ ಬಿಗುವುಗಳು ಸಂಗೀತಕ್ಕೆ ಭಾರವಾಗಲೇ ಬಾರದೆಂಬುದನ್ನು ಮಾಡಿ ತೋರಿಸಿದರು. ಸಂಗೀತದ ಒಳಗೆ ಅದು ಸಹಜವಾಗಿ ಹಾಸುಹೊಕ್ಕಾಗಿ ಬೆರೆತು ªುÀನೋಧರ್ಮದ ಎಲ್ಲ ಮಜಲುಗಳನ್ನು ಅನನ್ಯವಾಗಿ ತಲುಪಿ ಸಾಗಬಹುದೆಂಬುದನ್ನು ತಮ್ಮ ನುಡಿಸಾಣಿಕೆಯಲ್ಲಿ ತೋರಿಸಿಕೊಟ್ಟರು. ಸಂಗೀತದ ಪ್ರಥಮಾಭ್ಯಾಸಿಗಳೆಲ್ಲರೂ ಪ್ರಾರಂಭದಲ್ಲಿ ಕಲಿಯುವ ಶಂಕರಾಭರಣದ ಆದಿತಾಳÀ ವರ್ಣವೂ ಕೂಡಾ ಎಷ್ಟು ಗಂಭೀರವಾಗಬಲ್ಲದೆಂಬುದನ್ನು ರವಿಕಿರಣ್ ಅವರ ಸಂಗೀತ ತೋರಿಸಿಕೊಟ್ಟಿತು. ತೆಲಿಯಲೇರು ರಾಮಾ ಎಂದು ಚಿತ್ರವೀಣೆಯಲ್ಲಿ ಉದ್ಗರಿಸಿದ್ದೇ ತಡ ಶ್ರೋತೃ ವರ್ಗವೆಲ್ಲಾ ಒಮ್ಮೆಲೇ ಲೊಚಗುಟ್ಟಿದ ಆ ಕ್ಷಣ ಧೇನುಕ ರಾಗದ ಶಕ್ತಿಯನ್ನು ಹೊರಗೆಡಹಿದ ಅವರ ಸಾಮರ್ಥ್ಯವನ್ನು ಸೂಚಿಸುತ್ತದೆ. ಅದಕ್ಕೆ ನೀಡಿದ ಸ್ವರ ಕಲ್ಪನೆಯ ಸೌಂದರ್ಯ ವಿನಿಕೆಗಳು ಮಾದರಿಯೆನಿಸುವಂತಹುದು. ಕೀರವಾಣಿಯಲ್ಲಿ ಆಲಾಪನೆ, ತಾನಂ, ನೆರವಲ್, ಕಲ್ಪನಾಸ್ವರ ಹೆಣಿಗೆಗಳನ್ನು ಪೆÇೀಣಿಸಿದ ರೀತಿ, ಅವರು ಆ ರಾಗಕ್ಕೊಂದು ಕೊಟ್ಟ ನಿರೂಪಣೆಯೇ ಸರಿ. ಸ್ವರಾಕ್ಷರ ಪಲ್ಲವಿಯನ್ನು ಹಿಂಜುತ್ತಾ ಸಾಗಿ ಮನೋಧರ್ಮದ ಪರಾಕಾಷ್ಠೆಯನ್ನು ತಲುಪಿದ ರವಿಕಿರಣ್ ಪಲ್ಲವಿಯನ್ನು ಮೂರುಕಾಲಗಳಿಗೆ ನೇಯಲು ಹೋಗಲೇ ಇಲ್ಲ. ಅದೊಂದು ಕೊರತೆಯೆಂದೂ ನನಗೆ ಅನಿಸಲಿಲ್ಲ. ಸರಳವಾದ ಪಲ್ಲವಿಯಲ್ಲಿ ಪ್ರೌಢವಾದ ವರಸೆಗಳನ್ನು ಮಾಡಿ ಮಂದಹಾಸದ ತೃಪ್ತಿಯ ನೆಗೆಯಾಡಿದರು ರವಿಕಿರಣ್. ಅಕ್ಕರೈ ಶುಭಲಕ್ಷ್ಮಿ ನೀಡಿದ ರಾಗ, ಸಂಗತಿ, ಕಾರ್ವೆ, ಸ್ವರ ಮತ್ತು ಕೊನೆಯ ಸ್ವರದ ನಿನಾದವನ್ನು ಯಾರೂ ಮರೆಯಲಾರರು. ರವಿಕಿರಣ್ ಅವರಿಗೆ ಅತ್ಯಂತ ಸಮರ್ಪಕವೆನಿಸಿದ ಅನುಸಾರಣಿ ತಂತಿ ಅಕ್ಕರೈ ಅವರದು. ಪ್ರತೀ ಒಂದು ಸಂಗತಿಗಳಲ್ಲೂ ಪರಿಪೂರ್ಣತೆಯನ್ನು ತೋರುವ ಅವರ ಬಿಲ್ಲುಗಾರಿಕೆ, ರಾಗ ಸೂಕ್ಷ್ಮತೆ ಮತ್ತು ಕಾಲಪ್ರಮಾಣ, ಪ್ರಾಯಶಃ ಪ್ರಸ್ತುತ ಯಾವ ವಯಲಿನ್ ಪಕ್ಕವಾದ್ಯದವರೂ ತೋರಲಾರರು. ರವಿಕಿರಣ್ ಅವರ ರಾಗ ವಿಸ್ತಾರದ ಲಕ್ಷ್ಮಣ ರೇಖೆಯನ್ನು ಒಂದಿಷ್ಟೂ ದಾಟದೆ ಲಕ್ಷಣವಾಗಿ ರಾಗಲಕ್ಷ್ಯವನ್ನು ಹೊರಹಾಕಬಲ್ಲ ಅಪೂರ್ವ ಸಾಮಥ್ರ್ಯ ಅಕ್ಕರೈ ಅವರಿಗಿದೆ. ಹಾಗೆಯೇ ಹದವರಿತು ನುಡಿಸಾಣಿಕೆಯ ಅಂದ ಸೌಂದರ್ಯಕ್ಕೆ ಒಂದಿಷ್ಟೂ ತೊಂದರೆ ಬಾರದಂತೆ ಮೃದಂಗವನ್ನು ನುಡಿಸಿ ರವಿಕಿರಣ್ ಅವರನ್ನು ಹಿಂಬಾಲಿಸಿದ ಜಯಚಂದ್ರ ರಾವ್ ಪ್ರಶಂಸನೀಯರು. ಭಾರ್ಗವ ಹಾಲಂಬಿಯವರ ತಗ್ಗಿ ಬಗ್ಗಿ ನಡೆವ ಸುಲಲಿತ ಖಂಜಿರ ಸಾಥಿ ಕೂಡಾ ಅಷ್ಟೇ ಗಮನಾರ್ಹ. ಕಛೇರಿಯು ಅದ್ಭುತವಾಗಿ ಪರಿಪೂರ್ಣತೆಯ ಮಟ್ಟವನ್ನು ತಲುಪುವ ಸಂದರ್ಭದಲ್ಲಿ ಕೇಳುಗರಲ್ಲಿ ಅದಾವುದೋ ಒಂದು ಅಸಂತೃಪ್ತಿ ಕಾಡುತ್ತದೆ – ಇನ್ನೂ ಬೇಕು ಎಂಬ ಭಾವ; ಅದು ಸಾಕಾಗಲಿಲ್ಲ ಎಂಬ ಚಡಪಡಿಕೆ; ಮುಗಿದುಹೋಯಿತಲ್ಲಾ ಎಂಬ ಹಪಹಪಿಸುವಿಕೆ. ಇದು ರವಿಕಿರಣ್ ಅವರ ಕಛೇರಿಯ ಕೊನೆಯಲ್ಲಿ ಹಲವರು ಪಟ್ಟ ಬವಣೆ. ಸೌಂಡ್ ಸಿಸ್ಟಮ್‍ನಲ್ಲಿ ಸ್ವಾಭಾವಿಕವಾಗಿ ತಲೆದೋರಿದ ಹಲವಾರು ಕಿರಿಕಿರಿಗಳು ಈ ಅಸಂತೃಪ್ತಿಗೆ ಮತ್ತೆ ಗ್ರಾಸ ನೀಡಿದವು ಎಂದು ಬೇರೆ ಹೇಳಬೇಕಾಗಿಲ್ಲ.

Leave a Reply

Your email address will not be published. Required fields are marked *