ಸಪ್ಟೆಂಬರ್ 10 ರಂದು ಮಂಗಳೂರಿನ ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ವತಿಯಿಂದ ರಂಜನಿ ಸಂಸ್ಮರಣ ಕಾರ್ಯಕ್ರಮವಾಗಿ ಶ್ರೀ ಪಿ. ನಿತ್ಯಾನಂದ ರಾವ್ ಅವರು ಶಾರದಾ ವಿದ್ಯಾಲಯದಲ್ಲಿ ಕು. ಅರ್ಚನಾ – ಸಮನ್ವಿಯವರ ದ್ವಂದ್ವ ಹಾಡುಗಾರಿಕೆಯನ್ನು ಪ್ರಸ್ತುತ ಪಡಿಸಿದ್ದರು. ಈ ಚಿಕ್ಕವರಿಬ್ಬರೂ ಸಾವೇರಿ ವರ್ಣದ ಜತೆಗೆ ಬಹುಬೇಗನೆ ಕುದುರಿಕೊಂಡರು. ನೆಗಡಿಯಿಂದ ಆತಂಕಗೊಂಡ ಗಂಟಲು
ವೇದಿಕೆಯ ಮೇಲೆ ತನ್ನ ಇರವನ್ನು ತೋರಗೊಡಲಿಲ್ಲ. ಒಂದು ಪುಟ್ಟ, ಆದರೆ ಅಂzವÁದ ನೇಯ್ಗೆಯೊಂದಿಗೆ ಊತ್ತುಕ್ಕಾಡು ವೆಂಕಟಕವಿಯವರ ಪ್ರಣವಾಕಾರಂ ಎಂಬ ಆರಭಿ ರಾಗದ ಕೃತಿ ಪ್ರೌಢವಾಗಿ ಮೂಡಿ ಬಂತು. ಒಂದಾವರ್ತದ ಕಲ್ಪನಾ ಸ್ವರ ವಿನಿಕೆ ತುಸು ಬೇಗನೆ ಮೊಟಕುಗೊಂಡಿತು. ಕರ್ಣರಂಜನಿಯ ವಾಂಛತೋನುನಾ ದಲ್ಲಿ ಪ್ರೌಢತೆಯ ಚಿಟ್ಟೆ ವರಸೆÉಗಳು ಚೆನ್ನಾಗಿ ಮೂಡಿ ಬಂದವು. ಬಳಿಕ ಆಯ್ದದ್ದು ‘ನಳಿನಜಾಂಡ ತಲೆಯದೂಗಿ ಮೋಹಿಸುತಿರಲು’ ಎಂಬ ಪುರಂದರ ದಾಸರ ದೇವರನಾಮ. 28 ರಾಗಗಳ ಹೆಸರುಗಳನ್ನು ನೋಂದಾಯಿಸಿಕೊಂಡ ಈ ವಿಶೇಷ ರಚನೆಯನ್ನು ಮಕ್ಕಳಿಬ್ಬರೂ ಕರಾರುವಾಕ್ಕಾಗಿ ದೇವಗಾಂಧಾರಿಯಲ್ಲಿ ನಿರೂಪಿಸಿದ್ದರು. ಚಾರುಕೇಶಿ ರಾಗದ ವಿಸ್ತಾರ ಆಲಾಪನೆ, ತಾನಂ ಮತ್ತು ಅಚ್ಚರಿ ಎನಿಸಬಹುದಾದ ಕನ್ನಡದ ಪಲ್ಲವಿ ರಚನೆ – ನಗುವಾಗ ಎಲ್ಲಾ ನೆಂಟರು, ಅಳುವಾಗ ಯಾರೂ ಇಲ್ಲ – ಎಂಬ ವಿಳಂಬ 2 ಕಳೆ ಆದಿತಾಳದ ಅರೆ ಎಡುಪ್ಪು – ಕೇಳುಗರೆಲ್ಲರ ಮನ್ನಣೆಗೆ ಪಾತ್ರವಾಯಿತು. ಶ್ರೋತೃ ವರ್ಗದಲ್ಲಿದ್ದ ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥರು, ಘಟ ವಿದ್ವಾಂಸ ತ್ರಿಚ್ಚಿ ಕೆ. ಆರ್. ಕುಮಾರ್, ನಾಗಸ್ವರ ಕೋವಿದ ನಾಗೇಶ್ ಬಪ್ಪನಾಡು, ವಿದುಷಿ ಪ್ರಾರ್ಥನಾ ರಾವ್ – ಮಕ್ಕಳಿಬ್ಬರ ನಿರ್ವಹಣೆಯನ್ನು ಮುಕ್ತವಾಗಿ ಪ್ರಶಂಶಿಸಿದರು. ದ್ವಂದ್ವ ಹಾಡುಗಾರಿಕೆಯಲ್ಲಿ ಈರ್ವರೂ ತೋರಿದ ಹೊಂದಾಣಿಕೆ, ಸಮಜಾಯಿಸಿಕೆ ಹಾಗೂ ವಯಸ್ಸಿಗೆ ಮೀರಿದ ವಿದ್ವತ್ತನ್ನು ಮುಕ್ತವಾಗಿ ಶ್ಲಾಘಿಸಿದ ಕದ್ರಿಯವರು ಮಕ್ಕಳ ಈ ಕಛೇರಿಗೆ ಧನ್ಯವಾದ ¸ವÀುರ್ಪಣೆ ನೀಡುವಂತಾದದ್ದು ಅವರು ನೀಡಿದ ಆಶೀರ್ವಾದವೇ ಆಗಿತ್ತು. ವಯಲಿನ್‍ನಲ್ಲಿ ಸಹಕರಿಸಿದ ವಿ. ವಿ. ಶ್ರೀನಿವಾಸ ರಾವ್ ಅವರು ಆಕಾಶವಾಣಿಯ ಎ ಟಾಪ್ ಕಲಾವಿದರು. ರಂಜನಿಯ ಮೇಲಿನ ಪ್ರೀತಿಯಿಂದ ಅವರು ಬಂದು ತಮ್ಮ ವಯಲಿನ್ ವಾದನದ ಹಿರಿಮೆಯನ್ನು ತೋರಿಸಿದ್ದಲ್ಲದೆ ಮಕ್ಕಳೀರ್ವರಿಗೆ ಪ್ರೋತ್ಸಾಹ ನೀಡುತ್ತಾ ಸಾಗಿದ ಅವರ ಹಿರಿತನದ ಹರಕೆ ನೋಡುವವರಿಗೂ ಕೇಳುವವರಿಗೂ ಹಬ್ಬವೆನಿಸಿತ್ತು. ಪಲ್ಲವಿ ಹಾಡುಗಾರಿಕೆಯ ಕೊನೆಯಲ್ಲಿ ಮಕ್ಕಳೀರ್ವರೂ ರಾಗಮಾಲಿಕೆಯನ್ನು ಹೆಣೆಯುತ್ತಾ ಒಮ್ಮೆ ನಗುವಾಗ, ಮತ್ತೊಮ್ಮೆ ಅಳುವಾಗ ಎಂಬ ಎಡುಪ್ಪಿನಲ್ಲಿ ಸ್ವರ ನೇಯುವ ಚಮತ್ಕಾರವೆಸಗಿದ್ದು ವಿದ್ವಜ್ಜನರ ಮನ್ನಣೆಗೆ ಪಾತ್ರವಾಯಿತು. ಸುನಾದಕೃಷ್ಣನ ಮೃದಂಗÀ ಹಿಂಬಾಲಿಕೆ ಮತ್ತು ಸಮರ್ಥವೆನಿಸುವ ಚೊಕ್ಕ ತನಿಯಾವರ್ತನ ಶ್ಲಾಘನೀಯ. ಈ ಕಛೇರಿಯಲ್ಲಿ ರಾಗ, ತಾಳ, ಕೃತಿ ಪರಿಚಯಗಳನ್ನೂ ತಿಳಿಸಿ ಪ್ರಸ್ತುತಪಡಿಸಿದುದು ಗಮನಾರ್ಹ. ದಿನಾಂಕ 12.9.2015 ರಂದು ಶನಿವಾರ ರಂಜನಿ ಸಂಸ್ಮರಣ ಕಾರ್ಯಕ್ರಮವಾಗಿ ಮಣಿಕೃಷ್ಣ ಅಕಾಡೆಮಿಯಿಂದ ಮತ್ತೆ ಎರಡು ಕಛೇರಿಗಳು ಪ್ರಸ್ತುತಗೊಂಡಿದ್ದವು. ಮೊದಲನೆಯದು ಚೆನ್ನೈನ ಅಭಿಲಾಷ್ ಜಿ. ಅವರದು. ಒಳ್ಳೆಯ ಅನುರಣಿಸುವ ಶಾರೀರವಿದ್ದರೂ ಅದನ್ನು ಅನವಶ್ಯಕವಾಗಿ ಲೆಕ್ಕಾಚಾರದ ಹೊಡೆತಗಳೊಳಗೆ ದುಡಿಸಿಕೊಂಡು ಮಾಡುವ ಇತ್ತೀಚಿಗಿನ ಕರ್ನಾಟಕ ಶಾಸ್ತ್ರೀಯ ಸಂಗೀತದ ಒಲವುಗಳನ್ನು ನೋಡಿದರೆ ಅದು ಕೇವಲ ಬುದ್ಧಿ ಪ್ರಧಾನ ಸಂಗೀತವಾಗಿ ಉಳಿಯುವ ಅಪಾಯ ಕಾಣುತ್ತದೆ. ಮಾಯಾಮಾಳವ ಗೌಳದ ದೇವ ದೇವ ಕಲಯಾಮಿತೇಯ ವೇಗವೇ ಸಮಕಟ್ಟೆನಿಸಲಿಲ್ಲ. ಆಭೇರಿಯ ಭಜರೇ ಮಾನಸÀಕ್ಕೆ ಅಭಿಲಾಷ್ ನೀಡಿದ ಆಲಾಪನೆಯಲ್ಲಿ ಸೊಗಸಾದ ಹಲವಾರು ಸಂಗತಿಗಳಿದ್ದರೂ ತಮ್ಮ ಶೈಲೀಕೃತ ಶೈಲಿಯಿಂದಾಗಿ ರಾಗ ಭಾವಗಳಿಗೆ ಕೊರತೆ ಉಂಟಾಯಿತೆಂದೇ ನನUನಿÀಸುv್ತÀದೆ. ಇದಕ್ಕೆ ಹೆÉಚ್ಚಿನ ಪಾಲುಗಾರಿಕೆ ಮೃದಂಗದ ಸಾಯಿ ರಾಘವ್, ಚೆನ್ನೈ ಅವರದು. ಪತ್ರಿಯವರ ಶಿಷ್ಯರಾದರೂ ಪಾತ್ರವನ್ನರಿಯದೆ ಮೃದಂಗಕ್ಕೆ ಬಾರಿಸುವ ಪ್ರವೃತ್ತಿಯನ್ನು ಬಿಡದೇ ಇದ್ದರೆ ಹಾಡುಗಾರನು ಇದ್ದರೂ ಇಲ್ಲದಂತೆ. ಇಂತಹ ಶೋಚನೀಯ ಪರಿಸ್ಥಿತಿಯನ್ನು ಸಾಯಿಯವರು ನೀಡಿ ಕಛೇರಿಯ ಗುಣಮಟ್ಟವನ್ನು ಅಳೆಯುವುದಕ್ಕೆ ಸಾಧ್ಯವಾಗದಂತೆ ಮಾಡಿದ್ದಾರೆ. ಗಣರಾಜ ಕಾರ್ಲೆಯವರ ನುಡಿಸಾಣಿಕೆ ಅತ್ಯಂತ ಸಮರ್ಪಕ ಮತ್ತು ಸೊಗಸಾದದ್ದು. ಸಮಯೋಚಿತವಾದ ಕಾಲಪ್ರಮಾಣಗಳುಳ್ಳ ಅವರ ರಾಗ, ತಾಳ, ಲಯ ಜ್ಞಾನ ಪ್ರಶಂಸನೀಯ.

ಮುಂದಿನ ಎರಡು ಗಂಟೆಗಳ ಕಾಲ ನಡೆಸಿದ್ದ ಶಾರದಾ ಭಟ್ ಕಟ್ಟಿಗೆ ಅವರ ಹಿಂದೂಸ್ಥಾನೀ ಗಾಯನವು ಆ ಹಿಂದೆ ನಡೆದಿದ್ದ ಕರ್ನಾಟಕೀ ಕಛೇರಿಯ ಗದ್ದಲವನ್ನು ಶಾಂತಗೊಳಿಸಿ ಒಂದು ನೆಮ್ಮದಿಯ ಉಸಿರನ್ನು ಬಿಡುವುದಕ್ಕೆ ಸಹಕಾರಿಯಾಗಿತ್ತು. ಒಳ್ಳೆಯ ಮೃದು ಶಾರೀರವನ್ನು ಹೊಂದಿದ ಕಟ್ಟಿಗೆಯವರು ಕೇದಾರ್ ರಾಗದಲ್ಲಿ ಖ್ಯಾಲ್‍ನ್ನು, ಭಾಗೇಶ್ರೀ ಹಾಗೂ ಜೈಜೈವಂತಿಯಲ್ಲಿ ಛೋಟಾ ಖ್ಯಾಲ್‍ನ್ನು ನಿರೂಪಿಸಿದರು. ಭಾಗೇಶ್ರೀಯ ಪ್ರಸ್ತುತಿಯಲ್ಲಿ ಶಾರದಾ ಭಟ್ ಅವರ ಮೇಲುಗೈ ತಿಳಿಯುವಂತಿತ್ತು. ಅವರೊಂದಿಗೆ ಹಾರ್ಮೋನಿಯಂನಲ್ಲಿ ಶ್ರೀ ನರೇಂದ್ರ ಎಲ್. ನಾಯಕ್ ಹಾಗೂ ತಬಲಾದಲ್ಲಿ ಭಾರವೀ ದೇರಾಜೆ ಅವರು ಹಿತಮಿತವಾಗಿ ನುಡಿಸಿ ಸಹಕರಿಸಿದ್ದರು.

Leave a Reply

Your email address will not be published. Required fields are marked *