– Ramakrishna Shanubhog

‘ಗುರು’ ಎಂಬ ಶಬ್ದದ ಪೂರ್ಣ ಆನಂದವನ್ನು ಅವರ ಜೊತೆಯಲ್ಲಿದ್ದು ಸವಿದ ಸುದೈವಿ ನಾನು. ಶರಾವತಿ ನದಿಯ ಒಂದು ತೀರ ಹೊನ್ನಾವರದಲ್ಲಿ ನನ್ನ ಮನೆ. ಆ ತೀರ ಕಾಸರಕೋಡಿನ ‘ಸ್ನೇಹಕುಂಜ’ದಲ್ಲಿ ನನ್ನ ಗುರುಗಳಾದ ನಾರಾಯಣ ಪಂಡಿತರ ವಿವೇಕಾನಂದ ಆರೋಗ್ಯಧಾಮ.

ಸುಮಾರು 14 ವರ್ಷಗಳ ಹಿಂದೆ ನಾನು ಅವರನ್ನು ಮೊಟ್ಟ ಮೊದಲ ಬಾರಿ ಭೆಟ್ಟಿ ಆದೆ. ಸಂಗೀತದಲ್ಲಿ ತುಂಬಾ ಜ್ಞಾನಿ ಮತ್ತು ವಯಲಿನ್ ವಾದಕರೆಂದು ತಿಳಿದು ಚರ್ಚೆಗೆ ಹೋಗಿದ್ದೆ. ಸಿತಾರ ಮತ್ತು ಗಾಯನದ ಅಪೂರ್ಣ ಪ್ರವಾಸಗೈದ ನಾನು ಮಕ್ಕಳಿಗದರೂ ಸಂಗೀತಾಭ್ಯಾಸ ಮಾಡಿಸಿ ನನ್ನ ಕನಸನ್ನು ನನಸುಗೊಳಿಸುವ ವಿಚಾರದಲ್ಲಿದ್ದೆ. ಅವರು ಬಂದಿಶಗಳನ್ನು ರಚಿಸುತ್ತಿದ್ದು, ಗಾಯನವನ್ನು ಕಲಿಸುವರೆಂದು ತಿಳಿದು ಹುಡುಕುತ್ತಿರುವ ಬಳ್ಳಿ ಕಾಲಿಗೆ ಸಿಕ್ಕಂತಾಯ್ತು.

ಇಡಗುಂಜಿಯ ಮಹಾಗಣಪತಿಯ ಪೂಜೆಯೊಂದಿಗೆ ಅರ್ಪಿತನ ಕ್ಲಾಸು ಪ್ರಾರಂಭವಾದವು. ಪ್ರತಿದಿನ ಸಂಜೆ 6.30ರಿಂದ 8.30ರ ತನಕ ನಿರಂತರ 6 ವರ್ಷ ಸಾಗಿತು. ಅವರೊಂದಿಗೆ ನಾನು ಒಬ್ಬ ಶ್ರೋತೃ ಮತ್ತು ವಿದ್ಯಾರ್ಥಿ ಆದೆ.

ಪ್ರಾರಂಭದಲ್ಲಿ ಅವರು ಯಾವುದೇ ಸ್ವರಾಭ್ಯಾಸ, ಸರಗಮ ಅಭ್ಯಾಸ ಮಾಡಿಸಲೇ ಇಲ್ಲ. ನೇರ ಭೈರವ ರಾಗದಿಂದ ಆರಂಭ. ಅವರು ಪದ್ಧತಿ ಹೊಸತು. ಆರೋಹ ಇಲ್ಲ, ಅವರೋಹ ಇಲ್. ವಾದಿ ಸಂವಾದಿ ಲಕ್ಷಣ ಗೀತೆಗಳ ಪತ್ತೆ ಇಲ್ಲ. ಎಲ್ಲಾ ರಾಗಕ್ಕೂ ಇದೇ ನಿಯಮ. ಅವರ ಕಲಿಸುವಿಕೆಯಲ್ಲಿ ಸಿಲೆಬಸ್ ಇಲ್ಲ. ಯಾವುದೇ ಸಂಗೀತ ಪರೀಕ್ಷೆ ಕೂಡುವಂತಿಲ್ಲ. ಮನೆಯಲ್ಲಿ ಬೆಳಗ್ಗೆ ಎದ್ದು ಸ್ವರಾಭ್ಯಾಸ ಮಾಡುವುದೇ ಬೇಡ. 2 ವರ್ಷಗಳ ನಂತರ ಹಾಡಲು ಅನುಮತಿ. ಪ್ರಾಚೀನ ವಾಸ್ತು ಮಂದಿರ ಮತ್ತು ಸ್ವಾಮೀಜಿಗಳ ಸಮ್ಮುಖ ಮಾತ್ರ. ಎಲ್ಲಕ್ಕಿಂತ ಮಿಗಿಲಾಗಿ ಟ್ಯೂಷನ್ ಫೀ ಇಲ್ಲವೇ ಇಲ್ಲ. ರಾಗದ ಎಲ್ಲಾ ವಿಚಾರಗಳೂ ಅವರ ಬಂದಿಶ್‍ಗಳಲ್ಲೇ ಲಯಬದ್ಧವಾಗಿ ಸೇರಿರುತ್ತಿದ್ದವು.

ಕುಮಾರ ಗಂಧರ್ವರ ಗಾಯನ ಮತ್ತು ನಿರ್ಗುಣಿ ಭಜನ್‍ಗಳನ್ನು ನಾನು ಈ ಹಿಂದೆ ಅನೇಕ ವರ್ಷಗಳಿಂದ ಕೇಳಿ ಮೆಚ್ಚಿದ್ದೆ. ಆ ಗಾಯನದ ಒಳಗುಟ್ಟು, ಶೈಲಿಯನ್ನು ಕರಾರುವಾಕ್ಕಾಗಿ, ವಿವರಣೆ ಸಮೇತ ಕಲಿಸುವ ಗುರುಗಳು ನನ್ನ ಮಕ್ಕಳಿಗೆ ದೊರಕಿದ್ದು ನಮ್ಮೆಲ್ಲರ ಪೂರ್ವಜನ್ಮದ ಫಲವಲ್ಲದೇ ಬೇರಾವುದೂ ಅಲ್ಲ. ಯಾವುದನ್ನೂ ಬರೆಯಲು, ರೆಕಾರ್ಡ್ ಮಾಡಲು ಬಿಡಲಿಲ್ಲ. ಪ್ರಾರಂಭದಲ್ಲಿ ಅರ್ಪಿತನಿಗೆ ತುಂಬಾ ಕಷ್ಟವಾಯಿತು. ನಂತರ ನೆನಪಿನ ಶಕ್ತಿಯಿಂದ, ತಾಳಗಳ ಮಾತ್ರೆಗಳ ವಿಭಜನೆಯ ಜೊತೆಗೆ ಲಯಬದ್ಧವಾಗಿ ಹಾಡಲು ತಿಳಿದಾಗ ಅವರೂ ಸಹ ತಮ್ಮ ಪ್ರಯೋಗ ಸಿದ್ಧವಾಯಿತೆಂದು ಖುಷಿಪಟ್ಟದ್ದಿದೆ. ಅರ್ಪಿತನಿಗೆ ಉಸ್ಫೂರ್ತಿಯಾಗಿ ತಾನ ಬರತೊಡಗಿದಾಗ ಅವರು ಃಏಳಿದ್ದೇನೆಂದರೆ ನನ್ನ ಗುರು ಪಂ.ಕುಮಾರ ಗಂಧರ್ವರು ಒಂದು ದಿನವೂ ತಾನಗಳ ಅಭ್ಯಾಸ ಮಾಡುವುದನ್ನು ತಾನು ನೋಡಿಯೇ ಇಲ್ಲ ಎಂದು.

ಅವರು ಮಾಡಿದ ಪ್ರಯೋಗಗಳು ಒಂದೆರಡಲ್ಲ.

ಕನ್ನಡ ಭಾಷೆ ಮಾತ್ರ ತಿಳಿದಿರುವ ಜನರಿಗೆ ತಿಳಿಯುವಂತೆ ಕನ್ನಡದಲ್ಲಿ ಬಂದಿಶ್ ಮತ್ತು ಗಜಲ್‍ಗಳ ರಚನೆ. ಶುದ್ಧ ಕಲ್ಯಾಣದಲ್ಲಿ ‘ನೀನೇ ದಯಾ ಸಿಂಧು, ಕರುಣಾಮಯಿ ಮತ್ತು ನನ್ನ ಅತ್ಯಂತ ಪ್ರಿಯವಾದ ಗಜಲ್ ‘ನನ್ನ ಮನವು ಹೀಗೆ ಏಕೆ’ ಮತ್ತು ‘ಆಬಂಧ ಈ ಬಂಧ ಇದು ಯಾವ ಬಂಧನಾ’. ಅವರ ಇನ್ನೊಂದು ರಚನೆ ‘ಗೀತಿಕಾ, ಮೋರಿಆಸ ರಹ ನ ಜಾಯೆ ಅಧೂರಿ, ತೋರೆಗೀತ ಮೇರೆಸುರ ಮೇ ಕೈಸೆ ಗಾಂವೋ ವಲ್ಲಭ”

ಒಂದು ಶಬ್ದ-ಎರಡು ಅರ್ಥ ಬರುವ ಸುಂದರ ರಚನೆ ‘ಯೇಕೈಸಿ ಶಾಮ್, ಶ್ಯಾಮಬಿನಾ ಸೂರಜ ಸಂಗ ಡೂಬಿ ಮೋರಿ ಆಸ’

ಅವರ ಕೊನೆಯ ದಿನಗಳನ್ನು ನಮ್ಮ ಮನೆಯಲ್ಲಿ ಕಳೆಯಬೇಕೆಂಬುದು ನನ್ನ ಆಸೆ ಆಗಿತ್ತು. ನಮ್ಮ ಮನೆಗೆ ಹಬ್ಬದ ದಿನಗಳಲ್ಲಿ ಬಂದು 3-4 ದಿನ ಉಳಿದು ಹೋಗುತ್ತಿದ್ದು ಈಗ ಬರೇ ನೆನಪು. ನನ್ನ ಹೊಸಮನೆಗೆ ‘ನಾದಪಿಯಾ’ ಎಂದು ನಾಮಕರಣ ಮಾಡಬೇಕೆಂದು ನನ್ನ ಆಸೆ ಎಂದು ವಿನಂತಿಸಿದಾಗ ಭಾವಪರವಶರಾಗಿದ್ದು ಇನ್ನೂ ನೆನಪಿದೆ.

ಪ್ರತಿ ಬಂದಿಶ್ ರಚನೆ ಮಾಡುವಾಗ ಪ್ರತಿಸಾಲನ್ನು ನನಗೆ ಹೇಳಿ ತೋರಿಸುತ್ತಿದ್ದರು. ಬಂದಿಶ್ ಕಟ್ಟುವಾಗ ಕೃತಿ, ತಬಲಾ, ಹಾರ್ಮೋನಿಯಂ ಯಾವುದೂ ಇಲ್ಲ. ಕಣ್ಣು ಮುಚ್ಚಿ ಟೇಬಲ್ ಮೇಲೆ ತಾಳದ ಠೇಕಾ ಹಾಕುತ್ತಾ ಪೂರ್ವನಿರ್ಧರಿತ ಟಾಪಿಕ್‍ಗೆ ಅನ್ವಯಿಸುವ 2,3,4 ಅಕ್ಷರಗಳ ಹಿಂದಿ, ಬೃಜ ಅಥವಾ ಮಾಲವೀ ಭಾಷೆಯ ಶಬ್ದ ಭಂಡಾರ ಅವರ ಮನಸ್ಸಿನ ಪರದೆಯ ಮೇಲೆ ಮೂಡುತ್ತಿದ್ದವು. ಮಾತ್ರಗಳ ಲೆಕ್ಕದಂತೆ ಆ ರಾಗದಲ್ಲಿ ಜೋಡಿಸುತ್ತಾ ಹೋಗುತ್ತಿದ್ದರು. ಪ್ರತಿಕ್ಲಾಸಿನಲ್ಲಿ ನಮಗೆ ಕೇಳಿಸಿ ನಮ್ಮ ಮೆಚ್ಚುಗೆಯಿಂದ ಸಂತೋಷಪಡುತ್ತಿದ್ದರು.

ಒನ್ನೆ ಹೀಗೆ ಮಾತನಾಡುವಾಗ ನಾನು ಕೇಳಿದೆ, ಸರ್ ನೀವು ಕೃಷ್ಣ, ದುರ್ಗೆ, ಸರಸ್ವತಿ, ಈಶ್ವರ, ಸೂರ್ಯ, ಚಂದ್ರ ಇವೆಲ್ಲದರ ಮೇಲೆ ಬಂದಿಶ್ ರಚಿಸಿರುವಿರಿ. ನಿಮ್ಮ ಕುಲದೇವರಾದ ಗಣಪತಿಯ ಮೇಲೆ ಒಂದು ಬಂದಿಶ್ ರಚನೆ ಆಗಬೇಡವೇ?’ ಒಂದೇ ವಾರದಲ್ಲಿ ಮಾಲಕೌಂಸ ರಾಗದಲ್ಲಿ ‘ಅನಂತರೂಪ ಗೌರಿಸುತ’ ರಚನೆ ಸಿದ್ಧ. ದ್ರುಪದ ಶೈಲಿಯ ಷಟ್‍ತಾಳದಲ್ಲಿ. ನಂತರ ನನ್ ಮಗಳಾದ ಕು. ಅನ್ನಪೂರ್ಣಳಿಗಾಗಿ ಹಾಡಲು ‘ಪ್ರಥಮ ನಮನ ಕರೂಂ ಶ್ರೀ ಗಜಾನನ’ ಎಂಬ ಸುಂದರ ದೇವರನಾಮವನ್ನು ರಚಿಸಿದರು.

ಗಝಲ್, ಠುಮ್ರಿ, ಟಪ್ಪಾ, ದಾದ್ರಾ, ಹೋರಿ ಇವುಗಳ ಅಪಾರ ಸಂಗ್ರಹ ಪಂಡಿತರಲ್ಲಿತ್ತು. ಸ್ವತಃ ಪೀಲು, ಕಾಪಿ, ಖಮಾಜ, ಸಿಂಧೂರಾದಲ್ಲಿ ಸ್ವತಂತ್ರ ಠುಮ್ರಿ ರಚಿಸಿದ್ದರು.

ಕಲ್ಯಾಣ ಮತ್ತು ಮಿಶ್ರ ಭೈರವ ರಾಗದಲ್ಲಿಯೂ ಟಪ್ಪಾ ಹಾಡಬಹುದೆಂದು ಸಾವನಕಲ್ಯಾಣ ಟಪ್ಪಾ ‘ಸಾವನ ಆಯೋರಿ, ಗಗನಮೇ, ಬನಮೇ, ಘರಾಂಗನಮೇ’ ಮಿಶ್ರಭೈರವ (ಭೈರವ, ರಾಮಕಲಿ, ಕಾಲಿಂಗಡಾ) ಜಬಸೇ ನಾ ಸೂನಿ ತೋರಿ ಬನಸೂರಿಕಿ ಮಧುರ ಮಧುರ ಇತ್ಯಾದಿ.

2008ರಲ್ಲಿ ಅರ್ಪಿತನಿಗೆ ‘ಪಂ.ಪುಟ್ಟರಾಜ ಗವಾಯಿ ಬಾಲಕಲಾವಿದ ರಾಜ್ಯಪ್ರಶಸ್ತಿ ದೊರಕಿದ ಖುಷಿಯಿಂದ ಗದಗಿನಲ್ಲಿ ಹಾಡಲು ಗವಾಯಿಗಳ ಸೇವೆಯ ಮೇಲೆ ಹುಟ್ಟಿದ ಅಪ್ರತಿಮ ರಚನೆ ರಾಗ-ನಟದಲ್ಲಿ-ಗದುಗಿನಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.

‘ಧನಧನ ಭಾಗ ಮೇರೋ, ದರಸನ ಕರೋ ಪಾವನ ಗುರುಚರಣ ಕಮಲಕೋ,

ಮಠಕೇ ಮಹಂತ, ಗರೀಬನವಾಝ, ಅನಾಥ ಬಂಧು, ವಾಗ್ಗೇಯಕಾರ

ನಾದಪಿಯಾ ಅರ್ಪಿತ ಸುರಕೇ ಭಾವ ಪುಷ್ಟ…

ಒಂದು ಶನಿವಾರ ಬೇಗನೇ ಕ್ಲಾಸಿಗೆ ಹೋಗಿದ್ದೆವು.

ಇವತ್ತು ಯಾವ ರಾಗ ಕೇಳಿಸ್ತಿಯೋ ಎಂದರು. ನನ್ನ ಮಗನಿಗೆ ಆದ ಕ್ಲಿಷ್ಟಕರ ರಾಗ ಹಾಡಿ ಅಜ್ಜನ ಶಹಬ್ಬಾಸಗಿರಿ ಪಡೆಯುವ ಹಂಬಲ. ‘ಬಿಹಾಗಡಾ’ ಎಂದ ಅರ್ಪಿತ.

ಅಜ್ಜ ‘ನನಗೆ ಬಿಹಾಗಡಾ ತಿಳಿದಿದೆ. ನಿನಗೆ ಎಷ್ಟು ತಿಳಿದಿದೆ ಎಂದು ಕೇಳಿಸು’ಎಂದರು. ಅಜ್ಜನದೇ ಬಂದಿಶ್ ‘ಮನಹರ ಲೀನೋ, ಬಾವರೀ ಕಿಯೋ’ ಮತ್ತು ‘ಕೈಸೇ ಧರೂಂ ಧೀರ, ಪಿಹರವಾ’ 30 ನಿಮಿಷಗಳ ಗಾಯನ ಕೇಳಿ ನನ್ನ ರಚನೆಗಳಿಗೆ ನೀನೊಬ್ಬನೇ ನ್ಯಾಯಕೊಡಬಲ್ಲೆನೆಂದು ಆಶೀರ್ವದಿಸಿ ಭಾವ ಪರವಶರಾದರು. ನಾನೂ ದಿಗ್ಭ್ರಮೆಗೊಂಡೆ.

ರವಿವಾರ ಬೆಳಗ್ಗೆ ಫೋನ್ ಂಆಡಿ ಬರಲು ಹೇಳಿದರು. ನಾವು ಹೋದಾಗ ಅರ್ಪಿತನ ಕೈಯಲ್ಲಿ ಅವರ ಗುರು ಪಂ.ಕುಮಾರ್‍ಜೀಯವರ ರಚನೆಗಳ ಪುಸ್ತಕ ‘ಅನೂಪರಾಗ ವಿಲಾಸ’, ಅವರ ವಿಶೇಷ ಕಾರ್ಯಕ್ರಮದ ಮೂಲಪುಸ್ತಕಗಳನ್ನು ನೀಡಿದರು. ಅವೆಂದರೆ ‘ತ್ರಿವೇಣಿ’, ಗೀತವರ್ಷ, ಹೇಮಂತ, ವಸಂತ, ಹೋಳಿ ಗೀತೆಗಳು ಇತ್ಯಾದಿ. ಇದೆಲ್ಲಾ ನಿನಗೇ ಸೇರಬೇಕಾದ್ದು. ತಾವು 50 ವರ್ಷ ನುಡಿಸಿದಂತಹ ‘ಂಟಿಣoಟಿius Sಣಡಿಚಿಜiuಚಿಡಿius’ ವಯಲಿನ್‍ನ್ನು ನೀಡಿ ಭಾವ ಪರವಶರಾದರು. ನನ್ನ ಕಣ್ಣುಗಳಲ್ಲಿಯೂ ಸಾರ್ಥಕತೆಯ ಭಾಷ್ಪಗಳುದುರಿದವು.

ಸಂಗೀತದ ಏನೂ ಗಂಧಗಾಳಿ ಇರದ ನನ್ನ ಶ್ರೀಮತಿ ಋಆಧಿಕಾ ಸಹ ಮಕ್ಕಳು ಹಾಡುವುದನ್ನು ಕೇಳಿ ಅಜ್ಜನ ಎಲ್ಲಾ ಬಂದಿಶ್‍ಗಳನನ್ನೂ ಹಾಡಬಲ್ಲರು. ಅಜ್ಜನ ಸೇವೆಯಲ್ಲಿ ನನಗೆ ತುಂಬಾ ಸಹಕಾರವನ್ನು ನೀಡಿದರು.

26.11.2012 ರಂದು ಹೊನ್ನಾವರದಲ್ಲಿ ‘ಗುರುವಂದನೆ’ ಕಾರ್ಯಕ್ರಮ ಏರ್ಪಡಿಸಿದ್ದೆ. ಆಗ ಅಜ್ಜ ಹಾಸಿಗೆ ಹಿಡಿದಿದ್ದರು. ಅಜ್ಜ ಹೆದರಲಿಲ್ಲ. ನಾನು ಬೇಕಾದರೆ ವೇದಿಕೆಯಲ್ಲಿ ಸಾಯುವೆ, ನನ್ನ ಪ್ರಿಯ ಶಿಷ್ಯನ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದರು, ಬಂದರು, ಗುರುಕಾಣಿಕೆ ಸ್ವೀಕರಿಸಿ ಆಶೀರ್ವದಿಸಿದರು. ಅದೊಂದು ಮರೆಯಲಾಗದ ಕ್ಷಣ.

Leave a Reply

Your email address will not be published. Required fields are marked *