ಶಾಸ್ತ್ರೀಯ ಸಂಗೀತವನ್ನು ನಾವು ಯಾರಿಗಾಗಿ ಹಾಡಬೇಕು?

ಹಿಂದೆ, ತೋಡಿ ಸೀತಾರಾಮಯ್ಯ ಎಂಬವರೊಬ್ಬರು ಒಂದು ವಾರ ತೋಡಿ ರಾಗ ಹಾಡಿದ್ದರಂತೆ. ಅವರು ತಮ್ಮ ಅಂತರಂಗದಲ್ಲಿದ್ದ ತೋಡಿಯನ್ನು ಮೊಗೆದು ಮೊಗೆದು ತೋಡಿಕೊಂಡಿದ್ದರಂತೆ. ಹಿಂದಿನ ಸಂಗೀತಗಾರರು ತಮ್ಮ ಮನೆಯಲ್ಲೋ, ಜಮೀನ್ದಾರನ ಮನೆಯಲ್ಲೋ ತಮಗೆ ಬೇಕಾದ ಹಾಗೆ ಮನಬಿಚ್ಚಿ ಹಾಡುತ್ತಿದ್ದರಂತೆ. ದಿನಕ್ಕೆ ಇಂತಿಷ್ಟು ಹೊತ್ತು ಎಂದಿಲ್ಲ. ಲಹರಿ ಹಿಡಿದಂತೆ ಆ ದಿನದ ರಾಗ. ಮುಗಿಯದೇ ಹೋದರೆ ಮರುದಿನ ಸಂಧ್ಯಾವಂದನೆಯ ಬಳಿಕ ಮತ್ತೆ ಮುಂದುವರಿಕೆ. ಜಮೀನ್ದಾರನಿಂದ ಬೇಕಾದಷ್ಟು ಸಂಭಾವನೆ, ಖಿಲ್ಲತ್ತು, ಕಡಗ, ಪುರಸ್ಕಾರ, ಆ ಸಂಗೀತಗಾರನಿಗೆ ಇದರಿಂದ ಸಂದದ್ದು ಇದೆ. “ಶ್ರುತಿ Read More