ರಂಜನಿ ಸಂಸ್ಮರಣೆಯ ಕಛೇರಿಗಳು – 2018

ರಂಜನಿ ಮೆಮೋರಿಯಲ್ ಟ್ರಸ್ಟ್‍ನ 5 ನೇ ವಾರ್ಷಿಕ ಸಂಗೀತ ಕಾರ್ಯಕ್ರಮ, ಹಲವು ದ್ರಷ್ಟಿಯಿಂದ ಈ ಬಾರಿ ಭಿನ್ನವಾಗಿ ಅನನ್ಯವಾಗಿ ನೆರವೇರಿತು. ಸೆಪ್ಟೆಂಬರ್ 9 ಅಕಾಲಿಕವಾಗಿ ವಿಧೀವಶರಾದ, ಸಂಗೀತ ವಿದುಷಿ ರಂಜನಿ ಹೆಬ್ಬಾರ್ ಅವರ 36 ನೇ ಹುಟ್ಟುಹಬ್ಬವಾಗಿದ್ದು, ಈ ನೆನಪಿನಲ್ಲಿ ಈ ವರ್ಷ, ಸೆಪ್ಟೆಂಬರ್ 3 ರಿಂದ 9 ರ ವರೆಗೆ ಅತ್ಯಂತ ವಿಶಿಷ್ಟವಾದ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅತ್ಯುತ್ತಮವಾದ ಸಂಗೀತ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸಲಾಗುತ್ತದಾದರೂ, ಈ ಬಾರಿ ಸಂಗೀತ ಹಾಗೂ ಸತ್ಸಂಗದೊಂದಿಗೆ, ರಂಜನಿಯವರಿಗೆ ಪ್ರಿಯವಾದ ವಸ್ತುವಾಗಿದ್ದ, ಪ್ರವಚನ Read More

ರಂಜನಿ ಮೆಮೊರಿಯಲ್ ಕಛೇರಿಗಳು – 2017

“ರಂಜನಿ ಒಬ್ಬಾಕೆ ಅಸಾಮಾನ್ಯ ಪ್ರತಿಭೆ. ಆಕೆಯ ಸಂಗೀತ ಏಕೆ ಅನ್ಯಾದೃಶವಾದುದು ಎಂದರೆ ಕರ್ನಾಟಕ ಸಂಗೀತದ ವ್ಯಾಕರಣವನ್ನೂ ಸುಂದರತೆಯನ್ನೂ (ಏಸ್ತೆಟಿಕ್ಸ್) ಜತೆಜತೆಯಾಗಿ ಸರಿದೂಗಿಸಿಕೊಂಡು ಸೌಖ್ಯತೆಯನ್ನು ಮೆರೆದುದಕ್ಕಾಗಿ. ಅಲ್ಲಿ ವ್ಯಾಕರಣ ಶುದ್ಧತೆಯೂ ಇದೆ, ಕಣಕ್ಕು ಲೆಕ್ಕಾಚಾರಗಳೂ ಇವೆ, ಆದರೆ ಅವು ಯಾವುವೂ ರಾಗ, ಭಾವ, ತಾಳ, ಲಯಗಳಿಗೆ ಧಕ್ಕೆ ತರುವವುಗಳಲ್ಲ. ಇದನ್ನು ಈಗಿನ ಎಲ್ಲಾ ಕಲಾಕಾರರೂ ಅನುಕರಿಸಬೇಕಾಗಿದೆ. ಈ ದೃಷ್ಟಿಯಲ್ಲಿ ನಮ್ಮ ಜಿಲ್ಲೆ ರಂಜನಿಯ ಸಂಗೀತದಿಂದ ತುಂಬಾ ಪ್ರಭಾವಕ್ಕೊಳಗಾಗಿದೆ ಎನ್ನುವುದು ಸತ್ಯ” – ಎಂದು ಮನತುಂಬಿ ಮನದಾಳದ ಅಭಿಪ್ರಾಯವನ್ನು ಮುಂದಿಟ್ಟವರು Read More

ರಂಜನಿ ಮೆಮೊರಿಯಲ್ ಟ್ರಸ್ಟ್ ಕಛೇರಿಗಳು – 2016

ಸರೋಜಾ ಆಚಾರ್ಯ ತಮ್ಮ ಮಾಧುರ್ಯಪೂರ್ಣವಾದ ಸಂಗೀತಾಮೃತದಿಂದ ಜನತೆಯ ಮೆಚ್ಚುಗೆ ಮತ್ತು ಪ್ರೀತಿಪಾತ್ರರಾಗಿದ್ದ ಶ್ರೀಮತಿ ರಂಜನಿ ಅವರ ಸಂಸ್ಮರಣಾ ಕಾರ್ಯಕ್ರಮಗಳು ಮಣಿಪಾಲದ ಎಂಐಟಿ ವಾಚನಾಲಯದ ಸಭಾಂಗಣದಲ್ಲಿ ಸೆಪ್ಟೆಂಬರ್ 9 ರಿಂದ 12 ರವರೆಗೆ ನಡೆಯಿತು. ಇದನ್ನು ‘ರಂಜನಿ ಸಂಸ್ಮರಣಾ ಸಮಿತಿ’ಯು ಮಣಿಪಾಲ ವಿಶ್ವವಿದ್ಯಾಲಯ ಸಾಂಸ್ಕøತಿಕ ಸಮನ್ವಯ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಿತ್ತು. ಔಚಿತ್ಯಪೂರ್ಣವಾದ ಸಂಗೀತಮಯ ಶ್ರದ್ದಾಂಜಲಿಯಿದು ಎನಿಸಿತು. ಈ ಸರಣಿಯಲ್ಲಿ ನಾಲ್ಕು ದೊಡ್ಡ ಮತ್ತು ನಾಲ್ಕು ಸಣ್ಣ ಕಛೇರಿಗಳು ಸ್ಥಾನ ಪಡೆದವು. ಅಕ್ಕರೈ ಶುಭಲಕ್ಷ್ಮಿ – ಸ್ವರ್ಣಲತಾ ಅವರ ಶಾರೀರ Read More

ಮಿನುಗಿ ಮರೆಯಾದ ರಂಜನಿ ಎನ್ನುವ ಒಂದು ನಕ್ಷತ್ರ

ಮಿನುಗಿ ಮರೆಯಾದ ರಂಜನಿ ಎನ್ನುವ ಒಂದು ನಕ್ಷತ್ರ   Hail to thee blithe Spirit Bird thou never wert That from Heaven or near it Pourest thy full heart In profuse strains of Un premeditated art – Shellly   ರಂಜನಿ ಇಂದು ನಮ್ಮೊಂದಿಗಿಲ್ಲ. ನಕ್ಷತ್ರಗಳು ನೂರಾರು ಬೆಳಕಿನ ವರ್ಷಗಳಷ್ಟು ದೂರವಿದ್ದರೂ ಬಾನಿನತ್ತ ಮುಖವೆತ್ತಿದವನಿಗೆ ಅವುಗಳು ಮಿನುಗುವುದು ಕಾಣಿಸುತ್ತದೆ. ರಂಜನಿಯೂ ಅಷ್ಟೆ. ನಮ್ಮಿಂದ ಬಲು ದೂರ ಸರಿದಿದ್ದರೂ Read More